alex Certify ಮಗನ ಹೆಸರನ್ನ ತಪ್ಪಾಗಿ ಉಚ್ಚರಿಸುತ್ತಿದ್ದರಂತೆ ಈ ದಂಪತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನ ಹೆಸರನ್ನ ತಪ್ಪಾಗಿ ಉಚ್ಚರಿಸುತ್ತಿದ್ದರಂತೆ ಈ ದಂಪತಿ..!

ನಮ್ಮ ಹೆಸರನ್ನ ಯಾರಾದ್ರೂ ತಪ್ಪಾಗಿ ಉಚ್ಚರಿಸ್ತಾರೆ ಅಂದ್ರೆ ಸಾಕು ಕೋಪ ಬಂದುಬಿಡುತ್ತೆ. ಆದರೆ ನಮ್ಮ ಪೋಷಕರೇ ನಮ್ಮ ಹೆಸರನ್ನ ತಪ್ಪಾಗಿ ಉಚ್ಚರಿಸಿದರೆ..? ಇದೊಂದು ಜೀವಮಾನದ ಶಿಕ್ಷೆಯೇ ಸರಿ.

ಐರ್ಲೆಂಡ್​ನ 23 ವರ್ಷದ ಯುವತಿ ರೆಡ್ಡಿಟ್​ ವೆಬ್​ಸೈಟ್​​ನಲ್ಲಿ ಇಂತಹದ್ದೊಂದು ವಿಚಿತ್ರ ಪ್ರಸಂಗವನ್ನ ಶೇರ್​ ಮಾಡಿದ್ದಾರೆ. ಆಕೆಯ ಸೋದರ ಸಂಬಂಧಿ ಮತ್ತಾತನ ಪತಿ ಬರೋಬ್ಬರಿ 4 ವರ್ಷಗಳಿಂದ ತಮ್ಮ ಮಗುವಿನ ಹೆಸರನ್ನ ತಪ್ಪಾಗಿ ಉಚ್ಚರಿಸುತ್ತಿದ್ದರಂತೆ.

ಮಗುವಿನ ಹೆಸರನ್ನ ಈ ಯುವತಿ ಬಹಿರಂಗ ಮಾಡಿಲ್ಲ. ಆದರೆ ಆಕೆಯ ಸೋದರ ಸಂಬಂಧಿ ಇಂಗ್ಲೆಂಡ್​ನಲ್ಲಿ ವಾಸವಿದ್ದು ಅವರಿಗೆ ನಾಲ್ಕು ವರ್ಷದ ಮಗನಿದ್ದಾನೆ ಎಂಬುದಷ್ಟನ್ನೇ ಹೇಳಿದ್ದಾಳೆ. ಮೂಲತಃ ಐರಿಶ್​ನವರಾದ ಕಾರಣ ಲಿಯಾಮ್​ ಮತ್ತಾತನ ಪತ್ನಿ ಮಗುವಿಗೆ ಐರಿಶ್​ ಮೂಲದ ಹೆಸರನ್ನ ನೀಡಿದ್ದರು. ಆದರೆ ಅದನ್ನ ತಪ್ಪಾಗಿ ಉಚ್ಚರಿಸ್ತಾ ಇದ್ದದ್ದನ್ನ ಯುವತಿ ಗಮನಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...