ಪರ್ವತದ ಕಡಿದಾದ ಅಂಚಿನಲ್ಲಿ ಮಗುವಿನ ಜೊತೆ ಟೆಂಟ್ ಹಾಕಿ ವಾಸಿಸುತ್ತಿದ್ದ ಅಜಾಗರೂಕ ದಂಪತಿಯನ್ನ ಬ್ರಿಟನ್ ಪೊಲೀಸರು ಹಾಗೂ ಕೋಸ್ಟ್ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಉತ್ತರ ಇಂಗ್ಲೆಂಡ್ನ ಕ್ಲೆವೆಲೆಂಟ್ ಕೋಸ್ಟ್ ಲೈನ್ನಲ್ಲಿ ಪರ್ವತದ ಅಂಚಿನಲ್ಲಿ ಟೆಂಟ್ ಹಾಕಿಕೊಂಡಿದ್ದ ದಂಪತಿಯನ್ನ ಕೋಸ್ಟ್ಗಾರ್ಡ್ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಬ್ರಿಟನ್ನಲ್ಲಿ ಪ್ರಸ್ತುತ ಲಾಕ್ಡೌನ್ ಜಾರಿಯಲ್ಲಿದ್ದು ಲಾಕ್ಡೌನ್ ನಿಬಂಧನೆಯ ಪ್ರಕಾರ ರಾತ್ರಿಯಿಡೀ ಮನೆಯಿಂದ ಹೊರಗೆ ಉಳಿಯುವಂತಿಲ್ಲ. ಈ ಕುಟುಂಬ ಮನೆಯಿಂದ ಹೊರಗೆ ವಾಸಿಸುವ ಮೂಲಕ ಲಾಕ್ಡೌನ್ ನಿಯಮ ಉಲ್ಲಂಘಿಸಿದೆ.
ಈ ಪರ್ವತದ ಅಂಚಿನಿಂದ ದಂಪತಿ ಹಾಗೂ ಮಗುವನ್ನ ಶಿಫ್ಟ್ ಮಾಡಲಾಗಿದೆ. ಆದರೆ ಅವರು ಈಗ ಹೇಗಿದ್ದಾರೆ ಅನ್ನೋದಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಇದೊಂದು ಭಯಾನಕ ಸ್ಥಳವಾದ್ದರಿಂದ ರಕ್ಷಣಾ ಕಾರ್ಯ ನಡೆಸಲಿದ್ದ ಕೋಸ್ಟ್ ಗಾರ್ಡ್ ಸಿಬ್ಬಂದಿ ದಂಪತಿಗೆ ಸುರಕ್ಷತಾ ಸಲಹೆಗಳನ್ನ ನೀಡಿದ್ದರು. ಭೂಕುಸಿತದಿಂದ ಎಚ್ಚರವಾಗಿ ಇರುವಂತೆ ಹಾಗೂ ನಡೆಯಲು ಈಗಾಗಲೇ ಇರುವ ದಾರಿಯ ಮೇಲೆ ಕ್ರಮಿಸುವಂತೆ ಸಲಹೆ ನೀಡಲಾಯ್ತು.
ಈ ಭಯಾನಕ ಸ್ಥಳದ ಫೋಟೋವನ್ನ ಕೋಸ್ಟ್ಗಾರ್ಡ್ ಇಲಾಖೆ ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ.
https://www.facebook.com/CoastguardNE/photos/pcb.3771328059618193/3771323959618603/?type=3&theater