alex Certify ಪುಟ್ಟ ಮಗುವಿನೊಂದಿಗೆ ಹುಚ್ಚು ಸಾಹಸ ಮಾಡಿದ ದಂಪತಿ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಗುವಿನೊಂದಿಗೆ ಹುಚ್ಚು ಸಾಹಸ ಮಾಡಿದ ದಂಪತಿ ರಕ್ಷಣೆ

ಪರ್ವತದ ಕಡಿದಾದ ಅಂಚಿನಲ್ಲಿ ಮಗುವಿನ ಜೊತೆ ಟೆಂಟ್​ ಹಾಕಿ ವಾಸಿಸುತ್ತಿದ್ದ ಅಜಾಗರೂಕ ದಂಪತಿಯನ್ನ ಬ್ರಿಟನ್​ ಪೊಲೀಸರು ಹಾಗೂ ಕೋಸ್ಟ್​ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

ಉತ್ತರ ಇಂಗ್ಲೆಂಡ್​​ನ ಕ್ಲೆವೆಲೆಂಟ್​ ಕೋಸ್ಟ್​ ಲೈನ್​​ನಲ್ಲಿ ಪರ್ವತದ ಅಂಚಿನಲ್ಲಿ ಟೆಂಟ್ ಹಾಕಿಕೊಂಡಿದ್ದ ದಂಪತಿಯನ್ನ ಕೋಸ್ಟ್​ಗಾರ್ಡ್ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಬ್ರಿಟನ್​ನಲ್ಲಿ ಪ್ರಸ್ತುತ ಲಾಕ್​ಡೌನ್​ ಜಾರಿಯಲ್ಲಿದ್ದು ಲಾಕ್​ಡೌನ್​ ನಿಬಂಧನೆಯ ಪ್ರಕಾರ ರಾತ್ರಿಯಿಡೀ ಮನೆಯಿಂದ ಹೊರಗೆ ಉಳಿಯುವಂತಿಲ್ಲ. ಈ ಕುಟುಂಬ ಮನೆಯಿಂದ ಹೊರಗೆ ವಾಸಿಸುವ ಮೂಲಕ ಲಾಕ್​ಡೌನ್​ ನಿಯಮ ಉಲ್ಲಂಘಿಸಿದೆ.

ಈ ಪರ್ವತದ ಅಂಚಿನಿಂದ ದಂಪತಿ ಹಾಗೂ ಮಗುವನ್ನ ಶಿಫ್ಟ್ ಮಾಡಲಾಗಿದೆ. ಆದರೆ ಅವರು ಈಗ ಹೇಗಿದ್ದಾರೆ ಅನ್ನೋದಕ್ಕೆ ಮಾಹಿತಿ ಲಭ್ಯವಾಗಿಲ್ಲ.

ಇದೊಂದು ಭಯಾನಕ ಸ್ಥಳವಾದ್ದರಿಂದ ರಕ್ಷಣಾ ಕಾರ್ಯ ನಡೆಸಲಿದ್ದ ಕೋಸ್ಟ್​ ಗಾರ್ಡ್​ ಸಿಬ್ಬಂದಿ ದಂಪತಿಗೆ ಸುರಕ್ಷತಾ ಸಲಹೆಗಳನ್ನ ನೀಡಿದ್ದರು. ಭೂಕುಸಿತದಿಂದ ಎಚ್ಚರವಾಗಿ ಇರುವಂತೆ ಹಾಗೂ ನಡೆಯಲು ಈಗಾಗಲೇ ಇರುವ ದಾರಿಯ ಮೇಲೆ ಕ್ರಮಿಸುವಂತೆ ಸಲಹೆ ನೀಡಲಾಯ್ತು.

ಈ ಭಯಾನಕ ಸ್ಥಳದ ಫೋಟೋವನ್ನ ಕೋಸ್ಟ್​ಗಾರ್ಡ್​ ಇಲಾಖೆ ತನ್ನ ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ಶೇರ್​ ಮಾಡಿದ್ದು ಸಖತ್​ ವೈರಲ್ ಆಗಿದೆ.

Posted by HM Coastguard NE on Saturday, February 27, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...