alex Certify ಕೊರೊನಾ ವೈರಸ್​​ ಅಸ್ತಿತ್ವದಲ್ಲಿಲ್ಲ ಎಂದಿದ್ದ ವ್ಯಕ್ತಿಯೇ ಸೋಂಕಿಗೆ ಬಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವೈರಸ್​​ ಅಸ್ತಿತ್ವದಲ್ಲಿಲ್ಲ ಎಂದಿದ್ದ ವ್ಯಕ್ತಿಯೇ ಸೋಂಕಿಗೆ ಬಲಿ…!

ಕೊರೊನಾ ವೈರಸ್​​ ಜಗತ್ತಲ್ಲಿ ಇಲ್ಲ ಎಂದು ವಾದಿಸುತ್ತಿದ್ದ ವ್ಯಕ್ತಿ ಮಾಸ್ಕ್​​ನ್ನ ಧರಿಸದೇ ಭಾರಿ ಬೆಲೆ ತೆತ್ತಿದ್ದಾನೆ. ಕೊರೊನಾ ವೈರಸ್​ ಇಲ್ಲ ಎಂದು ಮಾಸ್ಕ್ ಧರಿಸದೇ ಬೀದಿ ಬೀದಿ ಅಲೆಯುತ್ತಿದ್ದ ಈ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು ಮಾತ್ರವಲ್ಲದೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 46 ವರ್ಷದ ಗ್ಯೇರಿ ಮ್ಯಾಥ್ಯೂ ಕೊರೊನಾದಿಂದ ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ.

ಸ್ಥಳೀಯ ಮಾಧ್ಯಮದ ವರದಿ ಪ್ರಕಾರ ಈ ವ್ಯಕ್ತಿ ಕೊರೊನಾ ಪಾಸಿಟಿವ್​ ವರದಿ ಬಂದ ಮಾರನೇ ದಿನವೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮ್ಯಾಥ್ಯೂ ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ ಈತ ಕೊರೊನಾ ವೈರಸ್​ ಜಗತ್ತಿನಲ್ಲಿ ಇದೆ ಎಂದೇ ನಂಬುತ್ತಿರಲಿಲ್ಲವಂತೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡೋದಾಗಲಿ ಅಥವಾ ಮಾಸ್ಕ್​ ಧರಿಸೋದಾಗಲಿ ಈ ರೀತಿಯ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿರಲಿಲ್ಲ ಎನ್ನಲಾಗಿದೆ.

ʼಕೊರೊನಾʼ ಲಸಿಕೆ ಸುರಕ್ಷತೆ ಕುರಿತಂತೆ ಮಾಹಿತಿ ಹಂಚಿಕೊಂಡ ಖ್ಯಾತ ವೈದ್ಯ

ಬ್ರಿಟನ್​​ನಲ್ಲಿ ಕೊರೊನಾದಿಂದಾಗಿ ಈವರೆಗೆ 1 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬ್ರಿಟನ್​ನಲ್ಲಿ ಕೊರೊನಾ ಆರಂಭದ ದಿನಗಳಲ್ಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ಅವಘಡ ಸಂಭವಿಸ್ತಾ ಇರಲಿಲ್ಲ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.

ಜಗತ್ತಿನಲ್ಲಿ ಕೊರೊನಾ ವೈರಸ್​ ಇಲ್ಲ ಅನ್ನೋದನ್ನ ಸಾಬೀತುಪಡಿಸಲಿಕ್ಕೋಸ್ಕರ ಮ್ಯಾಥ್ಯೂ ಮತ್ತಾತನ ಸ್ನೇಹಿತರು ಬೇಕು ಬೇಕಂತಲೆ ಮನೆಯಿಂದ ಹೊರಗೆ ಹೋಗುತ್ತಿದ್ದರಂತೆ. ಮೈಕಲ್​ ಗೋವೆ ಟೋರಿಯ ಸಂಸದ ಸರ್​ ಡೆಸ್ಮಂಡ್​ ಸ್ವೇನ್​ ಬಳಿಕ ಕ್ಷಮೆ ಕೇಳುವಂತೆ ಹೇಳಿದ್ದರು, ಡೆಸ್ಮೆಂಡ್​ ಕೊರೊನಾ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಕ್ಯಾಬಿನೆಟ್​ನ ಮಂತ್ರಿ ಲಾಕ್​ಡೌನ್​ ಹಾಗೂ ಕೊರೊನಾ ವೈರಸ್​ ವಿರುದ್ಧ ಮಾತನಾಡಿದ್ದರು. ಈ ಕಾರಣದಿಂದಾಗಿ ಮ್ಯಾಥ್ಯೂ ಕೂಡ ಜಗತ್ತಲ್ಲಿ ಕೊರೊನಾ ವೈರಸ್ ಅನ್ನೋದೇ ಇಲ್ಲ ಎಂದು ನಂಬಿದ್ದರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...