ಕೊರೊನಾ ವೈರಸ್ ಜಗತ್ತಲ್ಲಿ ಇಲ್ಲ ಎಂದು ವಾದಿಸುತ್ತಿದ್ದ ವ್ಯಕ್ತಿ ಮಾಸ್ಕ್ನ್ನ ಧರಿಸದೇ ಭಾರಿ ಬೆಲೆ ತೆತ್ತಿದ್ದಾನೆ. ಕೊರೊನಾ ವೈರಸ್ ಇಲ್ಲ ಎಂದು ಮಾಸ್ಕ್ ಧರಿಸದೇ ಬೀದಿ ಬೀದಿ ಅಲೆಯುತ್ತಿದ್ದ ಈ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು ಮಾತ್ರವಲ್ಲದೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 46 ವರ್ಷದ ಗ್ಯೇರಿ ಮ್ಯಾಥ್ಯೂ ಕೊರೊನಾದಿಂದ ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ.
ಸ್ಥಳೀಯ ಮಾಧ್ಯಮದ ವರದಿ ಪ್ರಕಾರ ಈ ವ್ಯಕ್ತಿ ಕೊರೊನಾ ಪಾಸಿಟಿವ್ ವರದಿ ಬಂದ ಮಾರನೇ ದಿನವೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮ್ಯಾಥ್ಯೂ ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ ಈತ ಕೊರೊನಾ ವೈರಸ್ ಜಗತ್ತಿನಲ್ಲಿ ಇದೆ ಎಂದೇ ನಂಬುತ್ತಿರಲಿಲ್ಲವಂತೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡೋದಾಗಲಿ ಅಥವಾ ಮಾಸ್ಕ್ ಧರಿಸೋದಾಗಲಿ ಈ ರೀತಿಯ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿರಲಿಲ್ಲ ಎನ್ನಲಾಗಿದೆ.
ʼಕೊರೊನಾʼ ಲಸಿಕೆ ಸುರಕ್ಷತೆ ಕುರಿತಂತೆ ಮಾಹಿತಿ ಹಂಚಿಕೊಂಡ ಖ್ಯಾತ ವೈದ್ಯ
ಬ್ರಿಟನ್ನಲ್ಲಿ ಕೊರೊನಾದಿಂದಾಗಿ ಈವರೆಗೆ 1 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬ್ರಿಟನ್ನಲ್ಲಿ ಕೊರೊನಾ ಆರಂಭದ ದಿನಗಳಲ್ಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ಅವಘಡ ಸಂಭವಿಸ್ತಾ ಇರಲಿಲ್ಲ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.
ಜಗತ್ತಿನಲ್ಲಿ ಕೊರೊನಾ ವೈರಸ್ ಇಲ್ಲ ಅನ್ನೋದನ್ನ ಸಾಬೀತುಪಡಿಸಲಿಕ್ಕೋಸ್ಕರ ಮ್ಯಾಥ್ಯೂ ಮತ್ತಾತನ ಸ್ನೇಹಿತರು ಬೇಕು ಬೇಕಂತಲೆ ಮನೆಯಿಂದ ಹೊರಗೆ ಹೋಗುತ್ತಿದ್ದರಂತೆ. ಮೈಕಲ್ ಗೋವೆ ಟೋರಿಯ ಸಂಸದ ಸರ್ ಡೆಸ್ಮಂಡ್ ಸ್ವೇನ್ ಬಳಿಕ ಕ್ಷಮೆ ಕೇಳುವಂತೆ ಹೇಳಿದ್ದರು, ಡೆಸ್ಮೆಂಡ್ ಕೊರೊನಾ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಕ್ಯಾಬಿನೆಟ್ನ ಮಂತ್ರಿ ಲಾಕ್ಡೌನ್ ಹಾಗೂ ಕೊರೊನಾ ವೈರಸ್ ವಿರುದ್ಧ ಮಾತನಾಡಿದ್ದರು. ಈ ಕಾರಣದಿಂದಾಗಿ ಮ್ಯಾಥ್ಯೂ ಕೂಡ ಜಗತ್ತಲ್ಲಿ ಕೊರೊನಾ ವೈರಸ್ ಅನ್ನೋದೇ ಇಲ್ಲ ಎಂದು ನಂಬಿದ್ದರಂತೆ.