alex Certify BIG NEWS: ಕೊರೋನಾ ಸಂಹಾರಕ್ಕೆ ರೆಡಿಯಾಯ್ತು ರಾಮಬಾಣ, ಮೊದಲ ಕೊರೋನಾ ಲಸಿಕೆ ಸಕ್ಸಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೋನಾ ಸಂಹಾರಕ್ಕೆ ರೆಡಿಯಾಯ್ತು ರಾಮಬಾಣ, ಮೊದಲ ಕೊರೋನಾ ಲಸಿಕೆ ಸಕ್ಸಸ್

ದುಬೈ: ಕೊರೋನಾ ವೈರಸ್ ಗೆ ಔಷಧ ಕಂಡುಹಿಡಿಯಲು ವಿಶ್ವದೆಲ್ಲೆಡೆ ನೂರಾರು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಇದೇ ವೇಳೆ ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ. ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿಯಾಗಿದೆ ಎಂದು ಇಟಲಿ ಘೋಷಣೆ ಮಾಡಿದೆ.

ಇಲಿ ಮತ್ತು ಮನುಷ್ಯರ ಜೀವಕೋಶದ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದೆ. ಸೆಪ್ಟಂಬರ್ ನಲ್ಲಿ ಮನುಷ್ಯರ ಮೇಲೆ ಅಧಿಕೃತವಾಗಿ ಪ್ರಯೋಗ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಚೀನಾದಲ್ಲಿ ಉಗಮವಾದ ಕೊರೋನಾ ವೈರಸ್ ಜಗತ್ತಿನೆಲ್ಲೆಡೆ ವ್ಯಾಪಿಸಿದ್ದು ಮರಣ ಮೃದಂಗವನ್ನೇ ಬಾರಿಸುತ್ತಿದೆ. ನೂರಾರು ವಿಜ್ಞಾನಿಗಳು ಸೋಂಕು ತಡೆಯಲು ಔಷಧ ಕಂಡು ಹಿಡಿಯುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಟಲಿ ರೋಮ್ ನಲ್ಲಿರುವ ಲಾಜ್ಜಾರೋ ಸ್ವಾಲಾಂಜನಿ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆಯಲ್ಲಿ ಕೊರೋನಾ ಸೋಂಕು ತಡೆಗೆ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಇಲಿ ಮೇಲೆ ಪ್ರಯೋಗಿಸಿದಾಗ ಆಂಟಿಬಾಡಿಗಳನ್ನು ಲಸಿಕೆ ಸೃಷ್ಟಿಸಿದೆ. ಮಾನವರ ಜೀವಕೋಶಗಳಲ್ಲಿ ಕೆಲಸ ಮಾಡಿದ ಲಸಿಕೆ ಕೊರೋನಾ ವೈರಾಣು ನಿಷ್ಕ್ರಿಯ ಮಾಡಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...