alex Certify ಕೊರೊನಾದಿಂದ ಚೇತರಿಸಿಕೊಂಡ ನಂತ್ರವೂ ಕಾಡುತ್ತೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಚೇತರಿಸಿಕೊಂಡ ನಂತ್ರವೂ ಕಾಡುತ್ತೆ ಈ ಸಮಸ್ಯೆ

ಕೊರೊನಾ ವೈರಸ್ ಲಸಿಕೆಗಾಗಿ ವಿಜ್ಞಾನ ಜಗತ್ತಿನಲ್ಲಿ ಸಂಶೋಧನೆ ವೇಗವಾಗಿ ನಡೆಯುತ್ತಿದೆ. ಅದೇ ಸಮಯದಲ್ಲಿ  ಕೋವಿಡ್ -19 ಬಗ್ಗೆ ಚೀನಾದ ವಿಜ್ಞಾನಿಗಳು ಆಘಾತಕಾರಿ ಸಂಗತಿ ಹೇಳಿದ್ದಾರೆ. ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳು ದೀರ್ಘಕಾಲದವರೆಗೆ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆಂದು  ವಿಜ್ಞಾನಿಗಳು ಹೇಳಿದ್ದಾರೆ.

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ರೋಗಿಗಳು ಚೇತರಿಸಿಕೊಳ್ಳಲು ಮಾರ್ಗಸೂಚಿಯನ್ನು ಸಹ ಬಿಡುಗಡೆ ಮಾಡಿದೆ. ವೈದ್ಯರು ಕೊರೊನಾ ಯುದ್ಧದಲ್ಲಿ ಗೆದ್ದ ರೋಗಿಗಳ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ಮಾಡಬೇಕು. ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳಲ್ಲಿ  ಶ್ವಾಸಕೋಶ, ಹೃದಯ, ಸ್ನಾಯು ಸಮಸ್ಯೆ ಮತ್ತು ಮನೋವೈದ್ಯಕೀಯ ಅಸ್ವಸ್ಥತೆಯಂತಹ ಸಮಸ್ಯೆ ಕಾಡುತ್ತದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಚೀನಾದಲ್ಲಿ ಈವರೆಗೆ 78,000 ಕ್ಕೂ ಹೆಚ್ಚು ರೋಗಿಗಳನ್ನು ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಕೊರೊನಾದಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ಜನರು ಚೇತರಿಕೆ ನಂತ್ರವೂ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳಲ್ಲಿ ಖಿನ್ನತೆ, ನಿದ್ರಾಹೀನತೆ ಸೇರಿದಂತೆ  ಮಾನಸಿಕ ಮತ್ತು ನರದೌರ್ಬಲ್ಯ ಸಮಸ್ಯೆ ಕಾಡುತ್ತದೆ. ಗಂಭೀರ ಮೂತ್ರಪಿಂಡದ ಸಮಸ್ಯೆಗಳು ಕಂಡುಬರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...