alex Certify ಎರಡನೇ ಬಾರಿಗೆ ಒಲಿದಿದೆ ವಿಶ್ವದ ಅತಿ ಕುಳ್ಳನ ಪಟ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೇ ಬಾರಿಗೆ ಒಲಿದಿದೆ ವಿಶ್ವದ ಅತಿ ಕುಳ್ಳನ ಪಟ್ಟ

ಕೊಲಂಬಿಯಾ: ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಎರಡನೇ ಬಾರಿಗೆ ಕೊಲಂಬಿಯಾದ ಎಡ್ವರ್ಡ್ ನಿನೋ ಹೆರ್ನಾಂಡೆಜ್ ಹೆಸರು ವಿಶ್ವದ ಅತಿ ಕುಳ್ಳ ಎಂದು ದಾಖಲಾಗಿದೆ.

ಸದ್ಯ 2 ಅಡಿ‌ 4.9 ಇಂಚು ಉದ್ದ ಇರುವ ಅವರು 2010 ರಲ್ಲಿ 2 ಅಡಿ 3.6 ಇಂಚು ಇದ್ದರು.‌ ಆಗ ಅವರ ಹೆಸರು ಗಿನ್ನಿಸ್ ಬುಕ್ ಆಫ್‌ ರೆಕಾರ್ಡ್ ನಲ್ಲಿ ದಾಖಲಾಗಿತ್ತು.

ಆದರೆ, ಅದೇ ವರ್ಷ ನೇಪಾಳದ ಖಾಗೇಂದ್ರ ಥಾಪಾ ಮಗರ್ ಎಂಬ 2 ಅಡಿ 2.41 ಇಂಚು ಎತ್ತರವಿರುವವರ ಹೆಸರು ದಾಖಲಾಗಿದ್ದರಿಂದ ಎಡ್ವರ್ಡ್ ಅತಿ ಕುಳ್ಳನ ಪಟ್ಟ ಕಳೆದುಕೊಂಡಿದ್ದರು. ನಂತರ ಆ ಪಟ್ಟ 1 ಅಡಿ 2.42 ಇಂಚಿನ ಚಂದ್ರ ಬಹದ್ದೂರ್ ಡಾಂಗಿ ಎಂಬ ನೇಪಾಳದ ಇನ್ನೊಬ್ಬ ವ್ಯಕ್ತಿಗೆ ಹೋಗಿತ್ತು. ಆದರೆ, ಆ ಇಬ್ಬರೂ ಮೃತಪಟ್ಟ ಕಾರಣ ಎಡ್ವರ್ಡ್ ಅವರಿಗೆ ಮರಳಿ ವಿಶ್ವದ ಎರಡನೇ ಅತಿ ಕುಳ್ಳ ವ್ಯಕ್ತಿ ಎಂಬ ಪಟ್ಟ ಲಭಿಸಿದೆ.

ಮಂಗಳವಾರ ಲ್ಯಾಟಿನ್ ಅಮೆರಿಕಾದಲ್ಲಿ ತೀರ್ಪುಗಾರರಾದ ನತಾಲಿಯಾ ರಾಮಿರೇಜ್ ಅವರು ಗಿನ್ನಿಸ್ ರೆಕಾರ್ಡ್ ಟೈಟಲ್ ಅನ್ನು ಅಧಿಕೃತವಾಗಿ ಹಸ್ತಾಂತರಿಸಿದರು. 1986 ರಲ್ಲಿ ಹುಟ್ಟಿದ ಎಡ್ವರ್ಡ್ ತಮ್ಮ 20 ನೇ ವಯಸ್ಸಿನಲ್ಲಿ ಹೈಪರ್ ಥೈರಾಯ್ಡಿಸಮ್ ಚಿಕಿತ್ಸೆ ಪಡೆದರು. ಆದರೆ, ಅವರು ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ.

“ಆಕಾರದಲ್ಲಿ ಸಣ್ಣಗಿದ್ದರೇನಂತೆ ಹೃದಯವಂತಿಕೆ ದೊಡ್ಡದಿರಬೇಕು. ನಾನು ಎಲ್ಲವನ್ನೂ ಸಾಧಿಸಬಯಸುತ್ತೇನೆ. ಅದಕ್ಕಾಗಿ ನನ್ನ ಮನಃಸ್ಥಿತಿಯನ್ನು ಸಿದ್ಧ ಮಾಡಿಕೊಂಡಿದ್ದೇನೆ. ನಾನು ಜಗತ್ತಿಗೆ ನಗುವನ್ನು ನೀಡುತ್ತೇನೆ” ಎಂಬುದು ಎಡ್ವರ್ಡ್ ಅವರ ಅಭಿಮತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...