alex Certify ಸೂಪರ್ ಮಾರ್ಕೆಟಲ್ಲಿ ಶಾಪಿಂಗ್ ಮಾಡುತ್ತೆ ಈ ಬೆಕ್ಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್ ಮಾರ್ಕೆಟಲ್ಲಿ ಶಾಪಿಂಗ್ ಮಾಡುತ್ತೆ ಈ ಬೆಕ್ಕು…!

ಮೆಕ್ಸಿಕೊ: ಬೆಕ್ಕಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತವೆ. ಇದನ್ನು ಅರಿತು ಮುದ್ದು ಬೆಕ್ಕುಗಳ ಸಾವಿರಾರು ವಿಡಿಯೋಗಳು ಜಾಲತಾಣಗಳಲ್ಲಿ ಅಪ್ಲೋಡ್ ಆಗುತ್ತಿವೆ.

ಬೆಕ್ಕೊಂದು ತನ್ನ ಪರಿಚಯದವರನ್ನು ಸೂಪರ್ ಮಾರ್ಕೆಟ್ ಗೆ ಕರೆದೊಯ್ದು ತನಗೆ ಬೇಕಾದ ತಿಂಡಿಯನ್ನು ಕೊಡಿಸುವಂತೆ ಒತ್ತಾಯಿಸುವ ವಿಡಿಯೋ ಈಗ ಪ್ರಸಿದ್ಧವಾಗಿದೆ.

ಮೆಕ್ಸಿಕೊದ ಪ್ರಾಥಮಿಕ ಶಾಲಾ ಶಿಕ್ಷಕಿ ತಾನಿಯಾ ಸಂಟೊಸ್ ದಾರಿ ಮೇಲೆ ಬೆಕ್ಕೊಂದನ್ನು ನೋಡಿದ್ದಾರೆ. ಇವರನ್ನು ಕಾಣುತ್ತಿದ್ದಂತೆ ಬೆಕ್ಕು ಹಿಂಬಾಲಿಸಲು ಪ್ರಾರಂಭಿಸಿದೆ.

ನಂತರ ಕಾರ್ಟೂನ್, ಎನಿಮೇಟೆಡ್ ಚಿತ್ರದಲ್ಲಿರುವಂತೆ ಬೆಕ್ಕು ವರ್ತಿಸಿದೆ. ತಾನಿಯಾ ಅವರನ್ನು ಸಮೀಪದ ಸೂಪರ್ ಮಾರ್ಕೆಟ್ ಗೆ ಕರೆದೊಯ್ದು, ಆಹಾರ ವಿಭಾಗಕ್ಕೆ ಹೋಗಿ ತನಗೆ ಬೇಕಾದ ಆಹಾರ ಪ್ಯಾಕೆಟ್ ತೋರಿಸಿ ಕೊಡಿಸುವಂತೆ ದುಂಬಾಲು ಬಿದ್ದಿದೆ.

ತಾನಿಯಾ ಅವರು ಇದೆಲ್ಲವನ್ನು ವಿಡಿಯೋ ಮಾಡಿದ್ದು, “Rabbit The intelligent Cat who guides people to buy their favorite food.” ಎಂಬ ಕ್ಯಾಪ್ಶನ್ ನೀಡಿ ಇನ್ಸ್ಟಾಗ್ರಾಂ‌ ನಲ್ಲಿ ಅಪ್‌ ಲೋಡ್ ಮಾಡಿದ್ದಾರೆ. ಪ್ರತಿ ಬಾರಿ ನಮಗೆ ಸಿಕ್ಕಾಗಲೂ ಬೆಕ್ಕು ತನಗೆ ಬೇಕಾದ ತಿಂಡಿ ಕೊಡಿಸಲು ಕೇಳುತ್ತದೆ ಎಂದು ಶಿಕ್ಷಕಿ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...