ವನ್ಯಜೀವಿಗಳನ್ನು ಒಳಗೊಂಡ ಸರ್ಕಸ್ ಸ್ಟಂಟ್ಗಳು ಬಲು ರಿಸ್ಕೀ ಹಾಗೂ ಪ್ರಾಣಿಹಿಂಸೆಗೆ ಪ್ರಚೋದನೆ ಕೊಡುವಂಥ ಕ್ರಿಯೆಯಾಗಿದೆ. ಅದೆಷ್ಟೇ ನುರಿತ ವೃತ್ತಿಪರರೇ ಆದರೂ ಸಹ ಈ ವಿಚಾರದಲ್ಲಿ ಯಾವಾಗ ಏನಾಗುತ್ತದೆಂದು ಹೇಳುವುದು ಕಷ್ಟ.
ವಿಶೇಷ ಪ್ಯಾಕೇಜ್: MSME, ಟ್ರಾವೆಲ್ ಸೇರಿ ವಿವಿಧ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಾಧ್ಯತೆ
ರಷ್ಯಾದ ಸರ್ಕಸ್ ಶೋ ಒಂದರಲ್ಲಿ ಹೀಗೇ ಆಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಿಪಿಇ ಕಿಟ್ ಧರಿಸುವವರಿಗೆಂದೇ ವಿದ್ಯಾರ್ಥಿಯಿಂದ ವಿಶೇಷ ʼಮಾಸ್ಕ್ʼ
ಪ್ರೇಕ್ಷಕರ ಮುಂದೆ ಶೋ ನಡೆಯುತ್ತಿದ್ದ ಸಂದರ್ಭದಲ್ಲೇ ಸಿಂಹಿಣಿಯೊಂದು ತನ್ನ ಟ್ರೇನರ್ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆಯ ವಿಡಿಯೋ ಇದು. ಯೂರಲ್ ಸಂಚಾರಿ ಸರ್ಕಸ್ ಕಂಪನಿಯ ವೇಗಾ ಹೆಸರಿನ ಸಿಂಹಿಣಿಯಿಂದ ಕಸರತ್ತು ನಡೆಸುತ್ತಿದ್ದ ವೇಳೆ ಈ ಘಟನೆ ಜರುಗಿದೆ. ಸಿಂಹಿಣಿಯನ್ನು ನಿಯಂತ್ರಣಕ್ಕೆ ತರಲು ಸರ್ಕಸ್ ಕಂಪನಿ ಸಿಬ್ಬಂದಿ ಸಫಲರಾದರೂ ಸಹ, ಟ್ರೇನರ್ ಮ್ಯಾಕ್ಸಿಮ್ ಒರ್ಲೋವ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.