alex Certify ಪಿಪಿಇ ಕಿಟ್​ ಧರಿಸುವವರಿಗೆಂದೇ ವಿದ್ಯಾರ್ಥಿಯಿಂದ ವಿಶೇಷ ʼಮಾಸ್ಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಇ ಕಿಟ್​ ಧರಿಸುವವರಿಗೆಂದೇ ವಿದ್ಯಾರ್ಥಿಯಿಂದ ವಿಶೇಷ ʼಮಾಸ್ಕ್ʼ

ಕೋವಿಡ್​ 19 ಸಾಂಕ್ರಾಮಿಕ ಬಂದೆರೆಗಿದಾಗಿನಿಂದ ಮಾಸ್ಕ್​​ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಇದೇ ವಿಚಾರವನ್ನ ಗಮನದಲ್ಲಿರಿಸಿ ಕೇರಳದ ವಿದ್ಯಾರ್ಥಿಯೊಬ್ಬರು ಮುಂಚೂಣಿ ಕಾರ್ಯಕರ್ತರು ಹಾಗೂ ವೈದ್ಯಲೋಕದ ಸಿಬ್ಬಂದಿಗೆಂದೇ ವಿಶೇಷ ಮಾಸ್ಕ್​ ಒಂದನ್ನ ಸಿದ್ಧಪಡಿಸಿದ್ದಾರೆ.

ಬಿ ಟೆಕ್​ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಕೆವಿನ್​ ಜ್ಯಾಕೋಬ್,​ ಮೈಕ್​ ಹಾಗೂ ಸ್ಪೀಕರ್​ನ್ನು ಹೊಂದಿರುವ ಮಾಸ್ಕ್​ನ್ನು ಕಂಡುಹಿಡಿದಿದ್ದಾರೆ. ಪಿಪಿಇ ಕಿಟ್​ ಧರಿಸಿದ ನಂತರ ಪರಸ್ಪರ ಸಂವಹನ ನಡೆಸೋದು ಕಷ್ಟವಾಗಿರೋದ್ರಿಂದ ಮಾಸ್ಕ್​ಗೆ ಸ್ಪೀಕರ್​ ಹಾಗೂ ಮೈಕ್​ನ್ನು ಅಳವಡಿಸಲಾಗಿದೆ. ಕೆವಿನ್​ರ ತಂದೆ – ತಾಯಿ ವೈದ್ಯರಾಗಿದ್ದು ರೋಗಿಗಳ ಜೊತೆ ಸಂವಹನ ನಡೆಸೋದು ಕಷ್ಟವಾಗ್ತಿರೋದ್ರ ಬಗ್ಗೆ ಹೇಳಿಕೊಂಡಿದ್ದರಿಂದ ಈ ಅನ್ವೇಷಣೆಯನ್ನ ಮಾಡಿದ್ದಾರೆ.

ಆಯಸ್ಕಾಂತದ ಸಹಾಯದಿಂದ ಮೈಕ್​ ಹಾಗೂ ಸ್ಪೀಕರ್​ನ್ನು ಮಾಸ್ಕ್​ಗೆ ಅಳವಡಿಸಲಾಗಿದೆ. ಮೂವತ್ತು ನಿಮಿಷಗಳ ಕಾಲ ಇದನ್ನ ಚಾರ್ಜ್ ಮಾಡಿದ್ರೆ ಸಾಕು 6-7 ಗಂಟೆಗಳ ಕಾಲ ಬಳಕೆ ಮಾಡಬಹುದು.

ಇದೀಗ ಕೆವಿನ್​ರ ಈ ವಿನೂತನ ಮಾಸ್ಕ್​ಗೆ ಬೇಡಿಕೆ ಹೆಚ್ಚಾಗಿದೆ. ಕೆವಿನ್​ರ ಪೋಷಕರು ಸೇರಿದಂತೆ ಸಾಕಷ್ಟು ವೈದ್ಯರು ಈ ಮಾಸ್ಕ್​ನ್ನೇ ಬಳಕೆ ಮಾಡುತ್ತಿದ್ದಾರಂತೆ. ಈಗಾಗಲೇ 50ಕ್ಕೂ ಹೆಚ್ಚು ಮಾಸ್ಕ್​ಗಳನ್ನ ಮಾರಾಟ ಮಾಡಿರುವ ಕೆವಿನ್​ ದೊಡ್ಡ ಕಂಪನಿಗಳ ಜೊತೆ ಒಡಂಬಡಿಕೆಗಾಗಿ ಕಾಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...