alex Certify ಜಗತ್ತಿನ ಯಾವುದೇ ಮೂಲೆಗೂ ಎರಡೇ ಗಂಟೆಯಲ್ಲಿ ವಿಮಾನ ಕೊಂಡೊಯ್ಯಬಲ್ಲ ಎಂಜಿನ್ ಅಭಿವೃದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಯಾವುದೇ ಮೂಲೆಗೂ ಎರಡೇ ಗಂಟೆಯಲ್ಲಿ ವಿಮಾನ ಕೊಂಡೊಯ್ಯಬಲ್ಲ ಎಂಜಿನ್ ಅಭಿವೃದ್ದಿ

Chinese Team Develop Futuristic Jet Engine That Can Fly Airplane Anywhere in World in 'Two Hours'

ಜಗತ್ತಿನ ಯಾವುದೇ ಮೂಲೆಗೂ ಕೇವಲ ಎರಡು ಗಂಟೆಗಳ ಒಳಗೆ ವಿಮಾನವನ್ನು ಕರೆದೊಯ್ಯಬಲ್ಲ ಜೆಟ್ ಎಂಜಿನ್‌ ಒಂದನ್ನು ಅನ್ವೇಷಣೆ ಮಾಡಿರುವುದಾಗಿ ಚೀನೀ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಸೌತ್‌ ಚೈನಾ ಮಾರ್ನಿಂಗ್ ಪೋಸ್ಟ್‌ ಪತ್ರಿಕೆಯಲ್ಲಿ ವರದಿಯಾದಂತೆ, ಬೀಜಿಂಗ್‌ ಸುರಂಗವೊಂದರಲ್ಲಿ ನಡೆಸಲಾದ ಪ್ರಯೋಗದ ವೇಳೇ ಈ ಎಂಜಿನ್ ಭಾರೀ ಶಕ್ತಿ ಹಾಗೂ ಇಂಧನ ಕ್ಷಮತೆಯನ್ನು ತೋರಿದೆ.

ಈ ಎಂಜಿನ್ ಮೂಲಕ ಅನ್ಯ ವಾತಾವರಣೆಕ್ಕೆ ಹೋಗಬಲ್ಲ ವಿಮಾನಗಳನ್ನೂ ಸಹ ಓಡಿಸಬಹುದಾಗಿದ್ದು, ವಿಮಾನವನ್ನು ಅಡ್ಡಡ್ಡವಾಗಿಯೂ ಟೇಕಾಫ್ ಮಾಡಿಸಬಹುದಾಗಿದೆ ಎಂದು ಸಂಶೋಧಕರ ತಂಡ ತಿಳಿಸಿದೆ.

ಜಲಜನಕ ಇಂಧನದಲ್ಲಿ ಚಲಿಸಬಲ್ಲ ಈ ಎಂಜಿನ್‌ನ ವಿನ್ಯಾಸ ಸರಳವಾಗಿದದ್ದು, ಸಿಂಗಲ್ ಸ್ಟೇಜ್‌ ಕಂಬಷನ್ ಚೇಂಬರ್‌ನಿಂದ ಕೆಲಸ ಮಾಡಬಹುದಾಗಿದೆ ಎಂದು ಬೀಜಿಂಗ್ ಮೂಲದ ಸಂಶೋಧಕರೊಬ್ಬರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...