alex Certify ಯುವಜನತೆ ಮದುವೆ ಕುರಿತು ತಲೆ ಕೆಡಿಸಿಕೊಂಡಿದೆ ಚೀನಾ ಸರ್ಕಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಜನತೆ ಮದುವೆ ಕುರಿತು ತಲೆ ಕೆಡಿಸಿಕೊಂಡಿದೆ ಚೀನಾ ಸರ್ಕಾರ…!

Chinese Millenials are Not Getting Married and the Government is Worried. Here's Why

ಮದುವೆಯಾಗುವ ನಿರ್ಧಾರವನ್ನು ಮುಂದೂಡುವ ಅಥವಾ ರದ್ದು ಮಾಡುವ ಟ್ರೆಂಡ್ ಚೀನಾದ ಯುವಕರಲ್ಲಿ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಮದುವೆಯಾಗುವ ಚೀನೀಯರ ಸಂಖ್ಯೆಲ್ಲಿ 41% ತಗ್ಗಿದೆ.

2013ರಲ್ಲಿ 2.38 ಕೋಟಿ ಚೀನೀಯರು ಹಸೆಮಣೆ ಏರಿದ್ದರೆ 2019ರಲ್ಲಿ 1.39 ಕೋಟಿ ಮಂದಿ ಚೀನೀಯರು ಮದುವೆ ಆಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದಿಂದ ತಿಳಿದು ಬಂದಿದೆ.

ವೇತನದಾರರೇ ಗಮನಿಸಿ..! ಕಡಿಮೆಯಾಗಲಿದೆ ಟೇಕ್ ಹೋಂ ಸ್ಯಾಲರಿ – ಹೆಚ್ಚಾಗಲಿದೆ ಪಿಎಫ್, ಗ್ರಾಚುಟಿ

ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಣದಲ್ಲಿ ಇಡಲು ಚೀನಾದ ಸರ್ಕಾರಗಳು ತಂದ ನಿಯಮಗಳ ಕಾರಣ ಈ ಇಳಿಮುಖ ಕಂಡು ಬಂದಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಮದುವೆಯಾಗುವ ವಯಸ್ಸಿನ ಜನರ ಸಂಖ್ಯೆ ಕ್ಷೀಣಿಸುತ್ತಾ ಸಾಗಿದೆ.

ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಹಾಗೂ ಲಿಂಗ ಸಮಾನತೆಯ ಬಗ್ಗೆ ಯುವಕರಿಗೆ ನಂಬಿಕೆ ಇಲ್ಲದೇ ಇರುವುದು ಸಹ ಮದುವೆಯಾಗುವವರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಇದು ಈಗ ಚೀನಾ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...