alex Certify BIG NEWS: ಭಾರತದಲ್ಲಿರುವ ವಿದೇಶಿಗರಿಗೆ ಚೀನಾ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದಲ್ಲಿರುವ ವಿದೇಶಿಗರಿಗೆ ಚೀನಾ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ

ಭಾರತದಲ್ಲಿ ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳಿಗೆ ಚೀನಾ ಪ್ರವೇಶವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚೀನಾ ನಿರ್ಧರಿಸಿದೆ. ಚೀನಿ ವೀಸಾ ಅಥವಾ ನಿವಾಸ ಪರವಾನಿಗಿ ಹೊಂದಿರುವ ಭಾರತದಲ್ಲಿರುವ ವಿದೇಶಿ ಪ್ರಜೆಗಳಿಗೆ ಈ ಆದೇಶ ಅನ್ವಯಿಸಲಿದೆ.

ಇದು ಮಾತ್ರವಲ್ಲದೇ ಚೀನಾ – ಭಾರತದ ಎಲ್ಲಾ ವಿಮಾನಗಳ ಹಾರಾಟಕ್ಕೆ ತಾತ್ಕಾಲಿಕ ಬ್ರೇಕ್​ ಹಾಕಿದೆ. ಚೀನಾದ ರಾಜತಾಂತ್ರಿಕ ಹಾಗೂ ಸಿ ವೀಸಾಗಳನ್ನ ಹೊಂದಿರುವ ವಿದೇಶಿಗರ ಮೇಲೆ ಈ ನಿರ್ಬಂಧ ಪರಿಣಾಮ ಬೀರುವುದಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಚೀನಾಗೆ ಭೇಟಿ ನೀಡುವ ವಿದೇಶಿಗರು ವೀಸಾ ಅರ್ಜಿಯನ್ನ ಭಾರತ – ಚೀನಿ ರಾಯಭಾರಿ ಕಚೇರಿಗೆ ಸಲ್ಲಿಸಬೇಕು ಎಂದು ಹೇಳಿದೆ.

ಹರಡುತ್ತಿರುವ ಕೊರೊನಾ ವೈರಸ್​ನ್ನ ನಿಯಂತ್ರಿಸಲು ಕೈಗೊಂಡಿರುವ ತಾತ್ಕಾಲಿಕ ಕ್ರಮ ಇದಾಗಿದೆ ಅಂತಾ ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ಚೀನಾದ ರಾಯಭಾರ ಕಚೇರಿಯಿಂದ ನೀಡಲಾದ ಈ ಪ್ರಕಟಣೆ ತಾತ್ಕಾಲಿಕ ಕ್ರಮವಾಗಿದ್ದು ಸೂಕ್ತ ಸಮಯದಲ್ಲಿ ಬದಲಾವಣೆ ನಿರೀಕ್ಷಿಸಬಹುದು ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...