alex Certify ಹತ್ತು ವರ್ಷದಿಂದ ಬೇರೆಯಾಗಿದ್ದ ತಂದೆ-ಮಗನನ್ನು ಸೇರಿಸಿದ ಟಿಕ್ ಟಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ತು ವರ್ಷದಿಂದ ಬೇರೆಯಾಗಿದ್ದ ತಂದೆ-ಮಗನನ್ನು ಸೇರಿಸಿದ ಟಿಕ್ ಟಾಕ್

10 साल से लापता पिता को ढूंढ रहा था बेटा, एक TikTok वीडियो ने ऐसे मिला दिया

ಸಾಮಾಜಿಕ ಜಾಲತಾಣ ಟಿಕ್ ಟಾಕ್ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜನರು ಹೆಚ್ಚೆಚ್ಚು ಪ್ರಮಾಣದಲ್ಲಿ ಟಿಕ್ ಟಾಕ್ ಬಳಸ್ತಿದ್ದಾರೆ. ಈ ಮಧ್ಯೆ 10 ವರ್ಷಗಳಿಂದ ನಾಪತ್ತೆಯಾಗಿದ್ದ ತಂದೆಯೊಬ್ಬ ಮಗನಿಗೆ ಸಿಕ್ಕಿದ್ದಾನೆ. ಘಟನೆ ಚೀನಾದಲ್ಲಿ ನಡೆದಿದೆ.

10 ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದ. ಕುಟುಂಬಸ್ಥರು ಆತನ ಹುಡುಕಾಟದಲ್ಲಿದ್ದರು. ಈ ಮಧ್ಯೆ ಮಗ ಲಾಂಗ್ ಜಿಯಾಮೆಂಗ್ ಟಿಕ್ ಟಾಕ್ ನಲ್ಲಿ ವಿಡಿಯೋ ಒಂದನ್ನು ನೋಡಿದ್ದಾನೆ. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬನ ದುಸ್ಥಿತಿ ಬಗ್ಗೆ ವಿವರಿಸಲಾಗಿದೆ. ತಿನ್ನಲು ಆಹಾರವಿಲ್ಲದ ವ್ಯಕ್ತಿ ಕಸದಲ್ಲಿ ಬಿದ್ದ ಆಹಾರ ತಿನ್ನುತ್ತಿದ್ದಾನೆ. ಆತನ ಪರಿಚಯವನ್ನು ಸರಿಯಾಗಿ ಹೇಳ್ತಿಲ್ಲವೆಂದು ಟಿಕ್ ಟಾಕ್ ವಿಡಿಯೋದಲ್ಲಿ ಹೇಳಲಾಗಿತ್ತು. ಸಹಾಯ ಮಾಡುವಂತೆ ಕೋರಲಾಗಿತ್ತು.

ಈ ವಿಡಿಯೋ ನೋಡಿದ ಲಾಂಗ್ ಜಿಯಾಮೆಂಗ್ ಇದು ತನ್ನ ತಂದೆ ಎಂಬುದನ್ನು ಪತ್ತೆ ಹಚ್ಚಿದ್ದಾನೆ. ಈತ ತನ್ನ ತಂದೆ ಎಂದು ಕಮೆಂಟ್ ಮಾಡಿದ್ದಾನೆ. ಆದ್ರೆ ಈ ವಿಡಿಯೋವನ್ನು ಯಾವ ಜಾಗದಲ್ಲಿ ತೆಗೆಯಲಾಗಿದೆ ಎನ್ನುವ ಬಗ್ಗೆ ಟಿಕ್ ಟಾಕ್ ಬಳಕೆದಾರ ಹೇಳಿಲ್ಲ. ಹಾಗಾಗಿ ಪೊಲೀಸ್ ಸಹಾಯ ಪಡೆಯುತ್ತೇವೆಂದು ಲಾಂಗ್ ಜಿಯಾಮೆಂಗ್ ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...