alex Certify ಒಬ್ಬನಿಂದ 37 ಮಂದಿಗೆ ಕೊರೋನಾ, ಒಂದೇ ದಿನ 57 ಕೇಸ್: ಮತ್ತೆ ಬೆಚ್ಚಿಬಿದ್ದ ಚೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬನಿಂದ 37 ಮಂದಿಗೆ ಕೊರೋನಾ, ಒಂದೇ ದಿನ 57 ಕೇಸ್: ಮತ್ತೆ ಬೆಚ್ಚಿಬಿದ್ದ ಚೀನಾ

ಬೀಜಿಂಗ್: ಚೀನಾ ಕೊರೊನಾ ಸೋಂಕು ಮುಕ್ತವಾಗಿದೆ ಎಂದು ಹೇಳಿದ ಬೆನ್ನಲ್ಲೇ ಒಂದೇ ದಿನ 57 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಕಳೆದ ಏಪ್ರಿಲ್ ನಿಂದ ಇದೇ ಮೊದಲ ಬಾರಿಗೆ ಚೀನಾದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಮತ್ತೊಮ್ಮೆ ವ್ಯಾಪಕವಾಗಿ ಹರಡುವ ಆತಂಕ ಎದುರಾಗಿದೆ. ಬೀಜಿಂಗ್ ಮಾಂಸ ಮತ್ತು ತರಕಾರಿ ಮಾರುಕಟ್ಟೆ ಪ್ರದೇಶದ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡಿದೆ.

ದಕ್ಷಿಣ ಬೀಜಿಂಗ್ ನಲ್ಲಿ ತರಕಾರಿ, ಮಾಂಸ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗಲಿದ್ದು ಈತನಿಂದ 37 ಮಂದಿಗೆ ಸೋಂಕು ಹರಡಿದೆ. ಶನಿವಾರ ಒಂದೇ ದಿನ 57 ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು ಆತಂಕ ಹೆಚ್ಚಾಗಿದೆ. ಏಪ್ರಿಲ್ ನಿಂದ ಇದುವರೆಗೆ ಒಂದೇ ದಿನ ದಾಖಲಾದ ಅತಿ ಹೆಚ್ಚು ಪ್ರಕರಣ ಇದಾಗಿದೆ. ದಕ್ಷಿಣ ಚೀನಾ ಭಾಗದ ಅನೇಕ ಪ್ರದೇಶಗಳನ್ನು ಬಂದ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...