alex Certify ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ಕಂಡು ಬೆಚ್ಚಿಬಿತ್ತು ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ಕಂಡು ಬೆಚ್ಚಿಬಿತ್ತು ಕುಟುಂಬ

ಏಕಾಂತ, ನೆಮ್ಮದಿ ಬಯಸಿ ದೂರಕ್ಕೆಲ್ಲೋ ಹೋಗುತ್ತೀರಿ, ಯಾರ ಕಾಟವೂ ಇಲ್ಲ ಎಂದುಕೊಂಡು ಆರಾಮವಾಗಿ ಮಲಗಿ ನಿದ್ರಿಸುತ್ತಾ ವಿಶ್ರಾಂತಿ ಪಡೆಯುತ್ತಿರುತ್ತೀರಿ.

ಆದರೆ, ಯಾರೋ ಬಂದು ನೆಮ್ಮದಿ ಭಂಗ ಮಾಡಿದರೆ ಹೇಗಿರುತ್ತದೆ ? ಏಕಾಂತಕ್ಕೆ ಭಂಗ ತಂದವರ ವಿರುದ್ಧ ಜಗಳಕ್ಕೇ ಹೋಗುತ್ತೇವೆ.

ಮ್ಯಾಟ್ ಬೆಟೆ ಎಂಬಾತ ಈಜುಕೊಳದ ಬದಿಯಲ್ಲಿ ಸನ್ ಬಾತ್ (ಸೌರಸ್ನಾನ) ಮಾಡುತ್ತಾ ಮಲಗಿರುತ್ತಾನೆ. ಅಲ್ಲಿಗೆ ಬರುವ ಕರಡಿಯೊಂದು,‌ ಈಜುಕೊಳದಲ್ಲಿ ನೀರು ಕುಡಿದು ಅಲ್ಲೇ ಸುತ್ತಾಡುತ್ತದೆ.

ಬಳಿಕ ಮ್ಯಾಟ್ ಬೆಟೆ ಬಳಿಗೆ ಬಂದು, ಕಾಲೆಳೆದು, ಹಾಯಾಗಿ ಮಲಗಿದ್ದವನನ್ನು ಎಬ್ಬಿಸುತ್ತದೆ. ಎಚ್ಚರಗೊಂಡು ನೋಡಿದ ಮ್ಯಾಟ್, ಸ್ಥಳದಲ್ಲಿ ಏನಾಯಿತು ಎಂಬುದು ಗೊತ್ತೇ ಆಗಲಿಲ್ಲ. ಏನೋ ಕಾಲೆಳೆದಂತೆ ಆಯಿತೇ ಹೊರತು, ಯಾರು ಏನು ಎತ್ತ ಎಂಬುದು ಅರಿವಿಗೆ ಬರಲೇ ಇಲ್ಲ. ಇಡೀ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದನ್ನು ಕಂಡು ಬೆಟೆ ಕುಟುಂಬ ಬೆಚ್ಚಿಬಿದ್ದಿದೆ. ಮ್ಯಾಟ್ ಬೆಟೆ ಪತ್ನಿ ದಾನ್, ಈ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Matt was a little startled yesterday while taking a rest by the pool ?*News outlets are free to use this video with proper credit*

Posted by Dawn Bete on Sunday, September 13, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...