alex Certify ದುಡ್ಡು ಹೊತ್ತೊಯ್ಯುವಾಗ ಸಿಕ್ಕಿಬಿತ್ತು ಕಳ್ಳ ಬೆಕ್ಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಡ್ಡು ಹೊತ್ತೊಯ್ಯುವಾಗ ಸಿಕ್ಕಿಬಿತ್ತು ಕಳ್ಳ ಬೆಕ್ಕು…!

ನೋಡುಗರೆಲ್ಲಾ ಬಿದ್ದು ಬಿದ್ದು ನಗುವಂತೆ ಮಾಡುವ ವಿಡಿಯೋವೊಂದರಲ್ಲಿ, ಬೆಕ್ಕೊಂದು ದುಡ್ಡಿನ ಕಂತೆಯೊಂದಿಗೆ ಓಡಿ ಹೋಗಲು ಯತ್ನಿಸಿದಾಗ, ಅದನ್ನು ಹಿಡಿದುಕೊಂಡ ವ್ಯಕ್ತಿಯೊಬ್ಬರು ಅದರ ಪ್ಲಾನ್‌ ಎಲ್ಲಾ ಹಾಳು ಮಾಡಿದ್ದನ್ನು ನೋಡಿದ ನೆಟ್ಟಿಗರಿಗೆ ಬಲೇ ಮನರಂಜನೆ ಸಿಕ್ಕಿದೆ.

ರಷ್ಯಾದ ಪಬ್ ಒಂದರಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಈ ವಿಡಿಯೋದಲ್ಲಿ ಮಿಂಚುತ್ತಿರುವ ಬೆಕ್ಕು, ಆ ಪಬ್‌ನ ಮಾಲೀಕರದ್ದಾಗಿದೆ. ಇಲ್ಲಿನ ಅನಾಪಾ ಎಂಬ ಊರಿನಲ್ಲಿ ಈ ಪಬ್ ಇದ್ದು, ಬೆಕ್ಕನ್ನು ಬೀದಿಯೊಂದರಿಂದ ಎತ್ತುಕೊಂಡ ಬಂದ ಪಬ್‌ನ ಯಜಮಾನಿ ನಡ್‌ಝೆಡಾ ವೊಡೋಲಾಝ್‌ಸಕ್ಯಾ ಅದನ್ನು ಪ್ರೀತಿಯಿಂದ ಸಾಕಿದ್ದಾರೆ.

ಈ ಬೆಕ್ಕಿಗೆ ಮಸ್ಯಾನ್ಯಾ ಎಂದು ಹೆಸರಿಟ್ಟಿದ್ದಾರೆ. ಮಸ್ಯಾನ್ಯಾ ಈ ಹಿಂದೆಯೂ ಸಹ ಹೀಗೇ ತುಂಟುತನ ಮಾಡಿಕೊಂಡು ದುಡ್ಡಿನ ಕಂತೆಯನ್ನು ಹೊತ್ತೊಯ್ಯುತ್ತಿದ್ದ ವೇಳೆ ಸಿಕ್ಕಿಬಿದ್ದಿತ್ತು.

View this post on Instagram

Приютили ворюгу !!!!

A post shared by ПивБар "СССР" (@pivbar_cccp) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...