alex Certify 23 ವರ್ಷ ದ್ವೀಪದಲ್ಲಿ ಏಕಾಂಗಿಯಾಗಿ ಕಳೆದ‌ ಕೋಟ್ಯಾಧಿಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

23 ವರ್ಷ ದ್ವೀಪದಲ್ಲಿ ಏಕಾಂಗಿಯಾಗಿ ಕಳೆದ‌ ಕೋಟ್ಯಾಧಿಪತಿ…!

ಆಸ್ಟ್ರೇಲಿಯಾ: ನಾವು ಒಂದು ತಿಂಗಳು ಮನೆಯಿಂದ ಹೊರಗೆ ಬೀಳದ್ದಕ್ಕೆ ಭೂಮಿಯೇ ತಲೆ ಮೇಲೆ ಕಳಚಿ ಬಿದ್ದಂತೆ ಆಡುತ್ತಿದ್ದೇವೆ. ಆದರೆ, ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ದ್ವೀಪದಲ್ಲಿ ಏಕಾಂಗಿಯಾಗಿ 23 ವರ್ಷ ಜೀವನಾವಶ್ಯಕ ವಸ್ತುಗಳಿಲ್ಲದೇ ಕಳೆದ ರೋಚಕ‌ ಕಥೆ ಇಲ್ಲಿದೆ.

ರಾಬರ್ಟ್ ಜೆಮ್ಸ್ ಸ್ಟಿಕ್ ಅವರ “ಕಾಸ್ಟ್ ಅವೇ” -ಹಾಲಿವುಡ್ ಚಲನ‌ಚಿತ್ರ ನೋಡಿದವರಿಗೆ ದ್ವೀಪದಲ್ಲಿ ಏಕಾಂಗಿಯಾಗಿ ಜೀವಿಸುವ ಕಥೆ ಗೊತ್ತಿರಬಹುದು. ಆದರೆ, ಉತ್ತರ ಆಸ್ಟ್ರೇಲಿಯಾದ ಕೋಟ್ಯಾಧಿಪತಿ ಉದ್ಯಮಿ ರಾಬಿನ್ಸನ್ ಕ್ರೂಸ್ 23 ವರ್ಷ ಏಕಾಂಗಿಯಾಗಿ ದ್ವೀಪದಲ್ಲಿ ಬದುಕಿದ್ದಾರೆ.

ರಾಬಿನ್ಸನ್ ಕ್ರೂಸ್ 28.4 ಮಿಲಿಯನ್‌ ಡಾಲರ್ ವಹಿವಾಟು ಹೊಂದಿದ ಉದ್ಯಮಿ. 1997 ರಲ್ಲಿ ಆದ ಷೇರು ಮಾರುಕಟ್ಟೆಯ ತಲ್ಲಣದಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಳ್ಳುತ್ತಾರೆ.‌ ನಂತರ ದ್ವೀಪ ವಾಸಕ್ಕೆ ತೆರಳುತ್ತಾರೆ. ಆದರೆ, ಅಲ್ಲಿಂದ ಅವರಿಗೆ ವಾಪಸಾಗಲು ಸಾಧ್ಯವಾಗುವುದಿಲ್ಲ. ಅಲ್ಲೇ ಅವರು ಜೀವನಾವಶ್ಯಕ ವಸ್ತುಗಳನ್ನು ಹುಡುಕುವುದನ್ನು ರೂಢಿಸಿಕೊಳ್ಳುತ್ತಾರೆ.

23 ವರ್ಷಗಳ ನಂತರ ವಾಪಸ್‌ ಮರಳಿದ ಅವರು ‘ದ ಮಿಲೇನಿಯರ್ ಕಾಸ್ಟ್ ವೇ’ ಎಂಬ ಪುಸ್ತಕವೊಂದನ್ನು ಬರೆದಿದ್ದು, ಕಳೆದ ಜುಲೈನಲ್ಲಿ ಪ್ರಕಟವಾಗಿದೆ. “ನಾನು ಎರಡು ಅಂಗಿ, ಎರಡು ಜೊತೆ ಚಡ್ಡಿ, ಸ್ವಿಮ್ಮಿಂಗ್ ಸೂಟ್, ಒಂದು ಬಾಟಲ್ ಮೆಣಸಿನ ಪುಡಿ, ಎರಡು ಪುಸ್ತಕಗಳಿರುವ ಒಂದು ಸೂಟ್ ಕೇಸ್ ಮಾತ್ರ ಕೊಂಡೊಯ್ದಿದ್ದೆ” ಎಂದು ರಾಬಿನ್ಸನ್ ಕ್ರೂಸ್ ಬರೆದುಕೊಂಡಿದ್ದಾರೆ.

“ಕೇವಲ ಹಣ ಮಾಡುವುದಕ್ಕಾಗಿ ಶ್ರಮಿಸುವುದು ಜೀವನವಲ್ಲ. ನನ್ನ ದ್ವೀಪ ವಾಸದಲ್ಲಿ ಜೀವನದ ವಿಭಿನ್ನ ಹಾದಿಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದೇನೆ” ಎಂದು‌ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...