alex Certify ʼದುರಾದೃಷ್ಟʼದ ಕಾರಣ ಹೇಳಿ ಕದ್ದ ವಸ್ತು ಹಿಂದಿರುಗಿಸಿದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದುರಾದೃಷ್ಟʼದ ಕಾರಣ ಹೇಳಿ ಕದ್ದ ವಸ್ತು ಹಿಂದಿರುಗಿಸಿದ ಮಹಿಳೆ…!

Canadian Tourist Who Stole Objects from Pompeii in 2005 Returns Them Claiming They Bring Bad Luck

ಇಟಲಿಯ ಪೊಂಪೇಯಿ ಪುರಾತತ್ವ ಸ್ಥಳದಿಂದ ಪ್ರಾಚೀನ ವಸ್ತುಗಳನ್ನ ಕದ್ದಿದ್ದ ಮಹಿಳೆ 15 ವರ್ಷಗಳ ಬಳಿಕ ಆ ವಸ್ತುಗಳನ್ನ ಹಿಂದಿರುಗಿಸಿದ್ದಾಳೆ.

ಕೆನಡಾದ ನಿಕೋಲ್​ ಎಂಬ ಹೆಸರಿನ ಮಹಿಳೆ 2005ರಲ್ಲಿ ಪ್ರಾಚೀನ್​ ರೋಮನ್​ ನಗರವಾದ ಪೊಂಪೇಯಿಗೆ ಭೇಟಿ ನೀಡಿದ್ದಳು. ಈ ವೇಳೆ ಅಲ್ಲಿಂದ 2 ಬಿಳಿ ಮೊಸಾಯಿಕ್​ ತುಂಡುಗಳು, 2 ಹೂದಾನಿ ಹಾಗೂ ಪಿಂಗಾಣಿ ವಸ್ತುಗಳನ್ನ ಕದ್ದಿದ್ದಳು. ಆದರೆ ಇದೀಗ ಆ ಎಲ್ಲ ವಸ್ತುಗಳನ್ನ ಹಿಂದಿರುಗಿಸಿರೋ ಮಹಿಳೆ, ಜೊತೆಗೆ ಕ್ಷಮಾಪಣಾ ಪತ್ರವನ್ನೂ ನೀಡಿದ್ದಾಳೆ.

ನಾನು 21 ವರ್ಷ ವಯಸ್ಸಿನವಳಾಗಿದ್ದಾಗ ಈ ನಗರಕ್ಕೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ ನಾನು ಈ ಎಲ್ಲಾ ವಸ್ತುಗಳನ್ನ ಕಳುವು ಮಾಡಿಕೊಂಡು ತೆರಳಿದ್ದೆ. ಆದರೆ ಇದನ್ನ ತೆಗೆದುಕೊಂಡು ಬಳಿಕ ನಾನು ಸ್ತನ ಕ್ಯಾನ್ಸರ್​ಗೆ ಗುರಿಯಾದೆ. ಈ ಹದಿನೈದು ವರ್ಷಗಳಲ್ಲಿ ನನ್ನ ಕುಟುಂಬ ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದೆ. ಐತಿಹಾಸಿಕ ವಸ್ತುಗಳನ್ನ ಖರೀದಿ ಮಾಡೋಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಾನು ಕಳುವು ಮಾಡಿದ್ದೆ. ಆದರೆ ಈ ಎಲ್ಲ ವಸ್ತುಗಳಲ್ಲಿ ಋಣಾತ್ಮಕ ಶಕ್ತಿಯಿದೆ. ಈ ವಿನಾಶದ ಭೂಮಿಯಲ್ಲಿ ಅದೆಷ್ಟೋ ಮಂದಿ ಪ್ರಾಣ ತೆತ್ತಿದ್ದಾರೆ. ಹೀಗಾಗಿ ಈ ಎಲ್ಲ ವಸ್ತುಗಳನ್ನ ಹಿಂದಿರುಗಿಸೋ ಮೂಲಕ ನನ್ನ ಕುಟುಂಬಕ್ಕೆ ಎದುರಾಗಿರೋ ದುರಾದೃಷ್ಟವನ್ನ ದೂರ ಮಾಡಿಕೊಳ್ಳಲು ಬಯಸುವೆ ಎಂದು ಬರೆದುಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...