alex Certify ಪ್ರವಾಸಿಗರ ಕಾರೊಳಗೆ ಕತ್ತು ತೂರಿಸಿ ಕುರುಕುಲು ತಿಂಡಿ ಕಸಿದ ಒಂಟೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರ ಕಾರೊಳಗೆ ಕತ್ತು ತೂರಿಸಿ ಕುರುಕುಲು ತಿಂಡಿ ಕಸಿದ ಒಂಟೆ…!

ಒಂಟೆಯೊಂದು ಪ್ರವಾಸಿಗರ ಕಾರಿನೊಳಗೆ ಕತ್ತು ತೂರಿಸಿ ಅವರು ತಂದಿದ್ದ ಕುರುಕಲು ತಿಂಡಿ ಮುಲಾಜಿಲ್ಲದೇ ಕಸಿದು, ಒಂದೇ ಏಟಿಗೆ ಸೇವಿಸಿದ ಪ್ರಸಂಗವೊಂದು ನಡೆದಿದೆ.

ಒಕ್ಲಾಹೋಮಾದ ಡ್ರೈವ್ ಥ್ರೂ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ನಾಥನ್ ಪಗ್ ಎಂಬುವರು ತಮ್ಮ‌ ಪತ್ನಿ, ಇಬ್ಬರು ಪುತ್ರಿಯರೊಂದಿಗೆ ಮೃಗಾಲಯಕ್ಕೆ ಹೋಗಿದ್ದಾರೆ.

ಅವರು ಒಂಟೆ ಮೀಸಲು ಪ್ರದೇಶದ ಬಳಿ ಸಮೀಪಿಸಿದಾಗ ಒಂದು ಒಂಟೆ ಅವರ ಕಾರಿನತ್ತ ಸಮೀಪಿಸಿದೆ.

ನೇರವಾಗಿ ನಾಥನ್ ಅವರ ಕೈಯಲ್ಲಿದ್ದ ಕಪ್ ಗೆ ಬಾಯಿ ಹಾಕಿ ಕಸಿದಿದೆ. ಬಳಿಕ ಹಿಂಭಾಗದ ಸೀಟ್ ನಲ್ಲಿದ್ದ ಮಗಳ ಕೈಯಲ್ಲಿದ್ದ ತಿಂಡಿ, ಪಾನೀಯ ಕಸಿದು ಬಾಯಿಗೆ ಸುರಿದುಕೊಂಡಿತು.

ಒಂಟೆಯ ಚೆಲ್ಲಾಟಕ್ಕೆ ಮಗಳು ಕೊಂಚ ಗಾಬರಿಗೊಂಡಳು, ಈ ದೃಶ್ಯ ನಗುವನ್ನೂ ತರಿಸಿತು, ಅಲ್ಲದೆ ಪ್ಯಾಂಟನ್ನು ಒದ್ದೆ ಮಾಡಿಕೊಂಡಿದ್ದಳು ಎಂದು ನಾಥನ್ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...