alex Certify ಚಿರತೆ ಹಿಡಿಯಲು ದೌಡಾಯಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆ ಹಿಡಿಯಲು ದೌಡಾಯಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ…!

ಅಮೆರಿಕದ ಒರೆಗಾನ್‌ನ ಮಲ್ಟ್‌ನೋಮಾ ಕೌಂಟಿಯಲ್ಲಿ ದೊಡ್ಡ ಬೆಕ್ಕುಗಳು ಕಣ್ಣಿಗೆ ಬೀಳುವುದು ಸಾಮಾನ್ಯ ಸಂಗತಿಯಾಗಿದೆ. ಇಲ್ಲೆಲ್ಲಾ ದಿನಂಪ್ರತಿ ಕೌಗರ್‌ಗಳು ಕಣ್ಣಿಗೆ ಬೀಳುತ್ತಲೇ ಇರುತ್ತವೆ.

ಕಳೆದ ಶುಕ್ರವಾರ ಬೆಳಗ್ಗಿನ ಜಾವ ಸ್ಥಳೀಯರೊಬ್ಬರು, ಇಲ್ಲಿನ ರಸ್ತೆಯೊಂದರ ಬಳಿ ತಮ್ಮ ಕಣ್ಣಿಗೆ ಚೀತಾದಂತ ಜೀವಿಯೊಂದು ಬಿದ್ದಿರುವುದಾಗಿ ತಿಳಿಸಿದ್ದಾರೆ. ಸಾಮಾನ್ಯವಾಗಿ ಮಲೆ ಸಿಂಹಗಳು ಇಲ್ಲಿ ಕಣ್ಣಿಗೆ ಬೀಳುತ್ತವೆ. ಆದರೆ ಚೀತಾ ಕಣ್ಣಿಗೆ ಬಿದ್ದಿದೆ ಎಂಬ ಸುದ್ದಿ ಕೇಳಿ ಕೌಂಟಿ ಶರೀಫ್ ಪೊಲೀಸರೂ ಸಹ ಆಶ್ಚರ್ಯಗೊಂಡಿದ್ದಾರೆ.

ನಿಜಕ್ಕೂ ಅಲ್ಲಿ ಏನಿದೆ ಎಂದು ತನಿಖೆ ಮಾಡಲು ಬಂದ ಡೆಪ್ಯೂಟಿ ಸಲ್ಲಿವನ್‌ಗೆ ಅಲ್ಲಿನ ದೃಶ್ಯವನ್ನು ಕಂಡು ಅಚ್ಚರಿಯಾಗಿದೆ. ಆ ಜಾಗಕ್ಕೆ ಹೋಗಿ ನೋಡಿದಾಗ ಅದೊಂದು ಪ್ರಾಣಿಯಂತೆ ಕಾಣುವ ಲೈಫ್ ಸೈಜ್ ಗೊಂಬೆ ಎಂದು ತಿಳಿದು ಬಂದ ಮೇಲೆ ಈ ಫನ್ನಿ ಘಟನೆಗೆ ತೆರೆ ಬಿದ್ದಿದೆ.

This morning, we received a call from a SW Portlander who reported seeing a big cat with “spots” in an elevated position…

Posted by Multnomah County Sheriff's Office on Friday, December 18, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...