alex Certify ಬಸ್‌ ಏರಿದವನ ʼಮಾಸ್ಕ್ʼ‌ ನೋಡಿ ಪ್ರಯಾಣಿಕರು ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್‌ ಏರಿದವನ ʼಮಾಸ್ಕ್ʼ‌ ನೋಡಿ ಪ್ರಯಾಣಿಕರು ಕಂಗಾಲು

Bus Passenger Uses Python as 'Face Mask' and Protective Gear Around His Neck in Manchester

ಮ್ಯಾಂಚೆಸ್ಟರ್‌ ನಗರದ ಬಸ್‌ ಒಂದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಕುತ್ತಿಗೆ ಸುತ್ತಲೂ ಹೆಬ್ಬಾವನ್ನು ಮಾಸ್ಕ್ ರೂಪದಲ್ಲಿ ಧರಿಸಿಕೊಂಡಿರುವುದು ಕಂಡುಬಂದಿದೆ.

46 ವರ್ಷ ವಯಸ್ಸಿನ ಈ ವ್ಯಕ್ತಿ ಇಲ್ಲಿನ ಸ್ಯಾಲ್‌ಫೋರ್ಡ್‌‌ನಲ್ಲಿ ಸ್ವಿಂಟನ್‌ ಬಸ್ಸನ್ನೇರಿದ್ದಾರೆ. ಕೊರೋನಾ ವೈರಸ್‌ನಿಂದ ರಕ್ಷಣೆಗೆ ಆತ ಮಾಡಿಕೊಂಡಿದ್ದ ವ್ಯವಸ್ಥೆಯನ್ನು ಕಂಡ ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಇದನ್ನು ಕಂಡ ಮಹಿಳೆಯೊಬ್ಬರು ಮೊದಲಿಗೆ ಆ ಹಾವನ್ನು ಒಂದು ’ಫಂಕೀ ಮಾಸ್ಕ್‌’ ಎಂದುಕೊಂಡಿದ್ದರು. ಆದರೆ ಹಾವಿನ ಚಲನೆ ಕಂಡ ಬಳಿಕ ಅವರು ದಂಗು ಬಡಿದಂತೆ ಆಗಿಬಿಟ್ಟಿದ್ದಾರೆ. ಹೆಬ್ಬಾವಿನಿಂದ ಬಸ್ಸಿನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...