alex Certify ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್:‌ ಬಿಯರ್‌ ಹೀರುತ್ತ ಕುಳಿತ ಅಪರಿಚಿತನ ಮಾತು ಕೇಳಿ ದಂಗಾದ ಮನೆಯೊಡತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್:‌ ಬಿಯರ್‌ ಹೀರುತ್ತ ಕುಳಿತ ಅಪರಿಚಿತನ ಮಾತು ಕೇಳಿ ದಂಗಾದ ಮನೆಯೊಡತಿ

ತನ್ನ ಮನೆಗೆ ಮರಳಿ ಬಂದ ಬ್ರಿಟನ್‌ನ ಮಹಿಳೆಯೊಬ್ಬರು ಬಿಯರ್‌ ಹೀರುತ್ತಾ ಕುಳಿತಿದ್ದ ಅಪರಿಚಿತನೊಬ್ಬ, ’ಇದು ನಿನ್ನ ಮನೆಯಲ್ಲ’ ಎಂದು ಹೇಳುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಆಂಟೋನಿ ಅಡಮ್ಸ್‌ ಎಂಬ 33 ವರ್ಷದ ಈ ಅಪರಿಚಿತ ತಾನು ನುಗ್ಗಿದ್ದ ಮನೆಯಲ್ಲಿ ಇದ್ದ ಫ್ರಿಡ್ಜ್‌ನಲ್ಲಿದ್ದ ಆಹಾರ ಹಾಗೂ ಪಾನೀಯಗಳನ್ನು ಸ್ವಾಹಾ ಮಾಡಿದ್ದಾನೆ.

ಗೃಹ ಬಂಧನದಲ್ಲಿದ್ದರಾ ಯುವರಾಣಿ…..?

ತಾನು ಇಡೀ ದಿನ ಈ ಮನೆಯಲ್ಲೇ ಇದ್ದು, ಇದು ನಿನ್ನ ಮನೆಯಲ್ಲ ಎಂದು ಮನೆಯ ಯಜಮಾನಿಗೇ ಜೋರಾಗಿ ಹೇಳಿದ್ದಾನೆ ಆಂಟೋನಿ.

ಫೋಸ್ಟರ್ಸ್ ಕ್ಯಾನ್‌‌ ಒಂದರ ಮೇಲೆ ಆಡಮ್ಸ್‌ನ ಡಿಎನ್‌ಎ ಮಾಹಿತಿ ಸಿಕ್ಕ ಬೆನ್ನಲ್ಲೇ ಪೊಲೀಸರು ಆತನನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಕಳ್ಳತನದ ಆರೋಪದ ಮೇಲೆ ಆತನನ್ನು ಸದ್ಯಕ್ಕೆ 876 ದಿನಗಳ ಕಾಲ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಮನೆಯ ಬಾಗಿಲು ಮುರಿದು, ಲಿವಿಂಗ್ ರೂಂನಲ್ಲಿದ್ದ ಮೇಜೊಂದನ್ನು ಹಾಳು ಮಾಡಿರುವುದಾಗಿ ತನಿಖೆ ವೇಳೆ ಆಡಮ್ಸ್ ಬಾಯಿಬಿಟ್ಟಿದ್ದಾನೆ. ಈ ವೇಳೆ ಮನೆಯಲ್ಲಿ ಸಿಕ್ಕ ವಸ್ತುಗಳನ್ನೆಲ್ಲಾ ಹ್ಯಾಂಡ್‌ ಬ್ಯಾಗ್‌ಗಳಿಗೆ ತುಂಬಿಕೊಂಡಿದ್ದಾಗಿ ತಿಳಿಸಿದ್ದಾನೆ ಆಡಮ್ಸ್‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...