alex Certify ಭೀಕರ ಶಬ್ದಕ್ಕೆ ಬೆಚ್ಚಿಬಿದ್ದು ಓಡಿದ್ಲು ಫೋಟೋ ತೆಗೆಸಿಕೊಳ್ಳುತ್ತಿದ್ದ ವಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೀಕರ ಶಬ್ದಕ್ಕೆ ಬೆಚ್ಚಿಬಿದ್ದು ಓಡಿದ್ಲು ಫೋಟೋ ತೆಗೆಸಿಕೊಳ್ಳುತ್ತಿದ್ದ ವಧು

Bride Running for Her Life in the Middle of Wedding Shoot Shows ...

ಬೈರೂತ್ ಬಂದರಿನ‌ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟಕ್ಕೆ ಇಡೀ ಲೆಬನಾನ್ ಬೆಚ್ಚಿ ಬಿದ್ದಿದೆ.‌ ಲೆಬನಾನ್ ರಾಜಧಾನಿ ಬೈರೂತ್ ನ ಬಂದರಿನಲ್ಲಿ ಘಟನೆ ನಡೆದಿದ್ದು, 75 ಜನ ಮೃತಪಟ್ಟಿದ್ದಾರೆ.‌ 2500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಸ್ಫೋಟದ ಸಂದರ್ಭದಲ್ಲಿ ಜನ ಬೆಚ್ಚಿಬಿದ್ದಿರುವ ವಿಡಿಯೋಗಳಿಂದ ತುಂಬಿ ಹೋಗಿದೆ.

ಸ್ಫೋಟ ಸಂಭವಿಸಿದ ಸ್ಥಳದ ಸ್ವಲ್ಪ‌ ದೂರದ ಕಟ್ಟಡವೊಂದರ ಮೇಲ್ಮಹಡಿಯ ಮೇಲೆ ಮದುವೆಯ ಫೋಟೋ ಶೂಟ್ ಒಂದು ನಡೆಯುತ್ತಿರುತ್ತದೆ. ಅಲ್ಲಿ ಬಿಳಿ ಬಟ್ಟೆ ಧರಿಸಿದ್ದ ವಧು ಫೋಟೋಕ್ಕೆ ಪೋಸ್ ಕೊಡುತ್ತಿರುತ್ತಾಳೆ. ಆದರೆ, ಇದ್ದಕ್ಕಿದ್ದಂತೆ ದೊಡ್ಡ ಶಬ್ಧದೊಂದಿಗೆ ಆದ ಸ್ಫೋಟ ಕಟ್ಟಡವನ್ನು ನಡುಗಿಸಿದ್ದು, ಬೆಚ್ಚಿಬಿದ್ದ ವಧು ರಕ್ಷಣೆಗಾಗಿ ಬೇರೆಡೆ ಓಡುವ ಸನ್ನಿವೇಶ ದಾಖಲಾಗಿದೆ. ವಿಡಿಯೋಗ್ರಾಫರ್ ಇನ್ನೊಂದೆಡೆ ಓಡಿ ರಕ್ಷಣೆ ಪಡೆದಿದ್ದ.

ಇನ್ನು ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಮೇಲೆ ಆಕಾಶದಲ್ಲಿ ಅಣಬೆಯಾಕಾರದ ಹೊಗೆ ಎದ್ದಿರುವ ವಿಡಿಯೋಗಳೂ ಜಾಲತಾಣಗಳಲ್ಲಿ ಅಪ್ಲೋಡ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...