alex Certify ಮೊಗದಲ್ಲಿ ನಗು ಉಕ್ಕಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಗದಲ್ಲಿ ನಗು ಉಕ್ಕಿಸುತ್ತೆ ಈ ವಿಡಿಯೋ

ಕೊರೋನಾ ಹಿನ್ನೆಲೆಯಲ್ಲಿ ಈಗ ಎಲ್ಲೆಲ್ಲೂ ಸಾಮಾಜಿಕ ಅಂತರದ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ನಾಯಿಗಳ ವಿಡಿಯೋವೊಂದು ಈ ಸಂದರ್ಭಕ್ಕೆ ತಕ್ಕಂತೆ ವೈರಲ್ ಆಗಿದೆ.

ಒಂದು ನಾಯಿ ತನ್ನ ಮಾಲೀಕನ ಕಾಲನ್ನು ಬಿಗಿದಪ್ಪಿ ಅಬ್ಬರಿಸಿ ಬೊಗಳುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅಲ್ಲಿದ್ದ ಮೂರ್ನಾಲ್ಕು ನಾಯಿಗಳು ಸಹ ಬೊಗಳುತ್ತವೆ. ಆದರೆ ಯಾವೂ ಸಹ ತಮ್ಮ ಸ್ಥಳ ಬಿಟ್ಟು ಕದಲದೆ ಅಲ್ಲಿಂದಲೇ ಅಬ್ಬರಿಸುತ್ತದೆ.

ಅದರಲ್ಲೂ ಮಾಲೀಕನ ಕಾಲನ್ನು ಗಟ್ಟಿಯಾಗಿ ಹಿಡಿದು ಅಬ್ಬರಿಸುವ ‘ಧೈರ್ಯಶಾಲಿ’ ನಾಯಿ ಗಮನ ಸೆಳೆಯುತ್ತದೆ. ನೆಟ್ಟಿಗರೂ ಸಹ ಈ ನಾಯಿಯ ಕುರಿತಂತೆ ಹೆಚ್ಚು ಕಾಮೆಂಟ್ ಮಾಡಿದ್ದಾರೆ. ಆ ನಾಯಿಗೆ ಶಿಬಾ ಇನು ಎಂದು ಹೆಸರಂತೆ. ಈ ವಿಡಿಯೋ 7.4 ಮಿಲಿಯನ್ ವೀಕ್ಷಣೆ ಪಡೆದಿದ್ದು, 9.4 ಲಕ್ಷ ಲೈಕ್ ಸಂಗ್ರಹಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...