alex Certify ವ್ಯಾಲೆಂಟೈನ್ಸ್​ ಡೇ ಆಚರಿಸಲು ಬಾಡಿಗೆಗೆ ಸಿಗ್ತಾನೆ ಲವ್ವರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಲೆಂಟೈನ್ಸ್​ ಡೇ ಆಚರಿಸಲು ಬಾಡಿಗೆಗೆ ಸಿಗ್ತಾನೆ ಲವ್ವರ್…!

ವ್ಯಾಲೆಂಟೈನ್ಸ್​ ಡೇಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ರೇಮಿಗಳು ವಿಶೇಷ ದಿನದಂದು ಯಾವ್ಯಾವ ಉಡುಗೊರೆಗಳನ್ನ ಕೊಡಬೇಕು ಎಂದು ಪ್ಲಾನ್​ ಮಾಡ್ತಿರ್ತಾರೆ.

ಇವೆಲ್ಲದರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ನೀವು ಬಾಡಿಗೆ ಕೊಟ್ಟರೆ ನಾನು ಬಾಯ್​ಫ್ರೆಂಡ್​ ಆಗೋಕೆ ರೆಡಿ ಇದ್ದೀನಿ ಎಂದು ಬೋರ್ಡ್​ ಹಿಡಿದುಕೊಂಡು ತಿರುಗುತ್ತಾ ಇದ್ದಾನೆ. ಅಂದಹಾಗೆ ಈತ ಈ ಉದ್ಯಮವನ್ನ ಕಳೆದ ಮೂರು ವರ್ಷಗಳಿಂದ ಮಾಡುತ್ತಾ ಬಂದಿದ್ದಾನೆ.

ಅಂದಹಾಗೆ ಈ ಬಾಡಿಗೆ ಬಾಯ್​ಫ್ರೆಂಡ್​ನ ಹೆಸರು ಶಕುಲ್.  ಅನೇಕರಿಂದ ತಿರಸ್ಕರಿಸಲ್ಪಟ್ಟು , ಪ್ರೀತಿಯಲ್ಲಿ ಹಲವಾರು ಬಾರಿ ವಿಫಲನಾದ ಬಳಿಕ ಬೇಸತ್ತು ಶಕುಲ್​ ಈ ಉದ್ಯಮವನ್ನ ಆರಂಭಿಸಿದ್ದಾನಂತೆ.

ಪ್ರತಿ ಬಾರಿ ವ್ಯಾಲೆಂಟೈನ್ಸ್​ ಡೇ ಬಂದಾಗಲೂ ಪ್ರೇಮ ನಿವೇದನೆ ವಿಚಾರದಲ್ಲಿ ತಾನೆಷ್ಟು ನತದೃಷ್ಟ ಎಂದು ಶಕುಲ್​​ಗೆ ​ಅನಿಸುತ್ತಂತೆ. ಶಕುಲ್​​ ಇಲ್ಲಿಯವರೆಗೆ ಪ್ರೇಮ ನಿವೇದನೆ ಮಾಡಿದ ಪ್ರತಿಯೊಬ್ಬ ಹುಡುಗಿಯರೂ ಈತನನ್ನ ನಿರಾಕರಿಸಿದ್ದು ಕೇವಲ ನಿನ್ನ ಸ್ನೇಹ ಮಾತ್ರ ಸಾಕು ಎಂದು ಹೇಳಿದ್ದಾರಂತೆ.

ಇಷ್ಟೆಲ್ಲಾ ಕತೆ ಬಳಿಕ ಒಂದಿನ ಶಕುಲ್​​ಗೆ ನನ್ನಂತೆ ಕೆಲ ಹುಡುಗಿಯರಿಗೂ ಇಂತಹ ಅನುಭವ ಆಗಿರಬಹುದು. ಅವರನ್ನೂ ಅನೇಕರು ನಿರಾಕರಿಸಿದ್ದಿರಬಹುದು ಎಂದು ಅನಿಸಿತಂತೆ.

ವ್ಯಾಲೆಂಟೈನ್ಸ್​ ಡೇ ಯಂದು ಉಚಿತ ಡಿವೋರ್ಸ್ ಆಫರ್..​..!

ಹೀಗಾಗಿ ಕಳೆದ ಮೂರು ವರ್ಷಗಳಿಂದ ಈತ ವ್ಯಾಲೆಂಟೈನ್ಸ್​ ಡೇಯಂದು ಬಾಡಿಗೆ ಬಾಯ್​ಫ್ರೆಂಡ್ ಆಗಿ ಕೆಲಸ ಮಾಡುತ್ತಾನೆ. ಈತನಿಗೆ ಈಗ ಅನೇಕ ಮಹಿಳೆಯರು ಹಾಗೂ ಯುವತಿಯರು ಬಾಡಿಗೆಗೆ ಬೇಕೆಂದು ಮೆಸೇಜ್​ ಮಾಡುತ್ತಾರಂತೆ. ಕಳೆದ ಮೂರು ವರ್ಷಗಳಲ್ಲಿ ಈತ 45ಕ್ಕೂ ಹೆಚ್ಚು ಮಹಿಳೆಯರ ಜೊತೆ ಡೇಟಿಂಗ್​ ಮಾಡಿದ್ದಾನಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...