alex Certify ಬಾಲಕ ಇಟ್ಟ ಗುರಿಗೆ ತತ್ತರಿಸಿ ಹೋದ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕ ಇಟ್ಟ ಗುರಿಗೆ ತತ್ತರಿಸಿ ಹೋದ ತಾಯಿ

ಲಾಕ್‌ ಡೌನ್ ಸಮಯದಲ್ಲಿ ಮಕ್ಕಳಿಗೆ ಮನೆಯಲ್ಲಿ ಪಾಠ ಮಾಡುವುದು ಪಾಲಕರಿಗೆ ದೊಡ್ಡ ಸವಾಲಾಗಿದೆ. ಕೆಲವರು ಮಕ್ಕಳಿಗೆ ಶಿಕ್ಷೆ ಕೊಟ್ಟರೆ , ಕೆಲವು ಮಕ್ಕಳು ತಮ್ಮ ಪಾಲಕರಿಗೆ ಶಿಕ್ಷೆ ಕೊಡುತ್ತಾರೆ. ಅದಕ್ಕೆ ಉದಾಹರಣೆ ಇಲ್ಲಿದೆ. ಇಲ್ಲೊಂದು ಪೋರ ತನಗೆ ಮನೆಯಲ್ಲಿ ಅಭ್ಯಾಸ ಹೇಳಿಕೊಡುತ್ತಿದ್ದ ಅಮ್ಮನಿಗೆ ಗಾಲ್ಫ್ ಬಾಲ್ ನಿಂದ ಹೊಡೆದಿದ್ದಾನೆ.

ದೂರದಲ್ಲಿ ನಿಂತು ಗುರಿಯಿಟ್ಟು ಗಾಲ್ಫ್ ಸ್ಟಿಕ್‌ನಿಂದ ಬಾಲ್ ನ್ನು ಅಮ್ಮನಿಗೆ ಗುರಿಯಿಟ್ಟು ಹೊಡೆದಿದ್ದಾನೆ. ಅಮ್ಮ ಅಟ್ಟಿಸಿಕೊಂಡು ಬಂದಾಗ ಓಡಿ ಹೋಗುವ ಬಾಲಕನ ವಿಡಿಯೋ ವೈರಲ್ ಆಗಿದೆ.

ಟ್ವಿಟರ್ ನಲ್ಲಿ ಶೇರ್ ಆದ ವಿಡಿಯೋ 2.7 ಮಿಲಿಯನ್ ಜನ ವೀಕ್ಷಿಸಿದ್ದಾರೆ. 37 ಸಾವಿರ ಲೈಕ್ ಗಳು ಬಂದಿವೆ. “ವಿಡಿಯೋವನ್ನು ರೆಕಾರ್ಡ್ ಮಾಡಿದ ತಂದೆ ನಿಜವಾಗಲೂ ತೊಂದರೆಯಲ್ಲಿದ್ದಾರೆ” ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ” ಯಾರೊಬ್ಬರೂ ಕ್ಲಾಸ್ ನಲ್ಲಿ ತಿರುಗಿಕೊಂಡು ಪಾಠ ಮಾಡಬಾರದು” ಎಂದು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...