alex Certify 5 ವರ್ಷದ ಬಾಲಕನ ಕೆಲಸ ಕಂಡು ಹೌಹಾರಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ವರ್ಷದ ಬಾಲಕನ ಕೆಲಸ ಕಂಡು ಹೌಹಾರಿದ ಪೊಲೀಸರು

ಐದು ವರ್ಷದ ಬಾಲಕನೊಬ್ಬ ಪೋಷಕರ ಗಮನಕ್ಕೆ ಬಾರದಂತೆ ಮೂರು ಕಿಲೋಮೀಟರ್ ಕಾರು ಓಡಿಸಿದ ಪ್ರಸಂಗವೊಂದು ಅಮೆರಿಕಾದಲ್ಲಿ ನಡೆದಿದೆ.

ತನಗೆ ಲ್ಯಾಂಬೋರ್ಗಿನಿ ಕಾರು ಕೊಡಿಸುವಂತೆ ಆತ ಹಠಹಿಡಿದಿದ್ದ, ತಾಯಿ ಬೇಡಿಕೆಯನ್ನು ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಬಾಲಕ ಮೂರು ಕಿಲೋಮೀಟರ್ ಕಾರು ಓಡಿಸಿದ್ದಾನೆ.

ರಸ್ತೆಯಲ್ಲಿದ್ದ ಪ್ಯಾಟ್ರೋಲಿಂಗ್ ಅಧಿಕಾರಿಗಳು ಬಾಲಕ ಕಾರಿನ ಡ್ರೈವಿಂಗ್ ಸೀಟಲ್ಲಿ ಇರುವುದನ್ನು ಗಮನಿಸಿ ಹೌಹಾರಿದ್ದಾರೆ. ಬಳಿಕ ಆತನ ಕುಟುಂಬದ ವಿವರವನ್ನು ಪಡೆದು ಅವರಿಗೆ ವಿಷಯ ಮುಟ್ಟಿಸಲಾಗಿದೆ.

ಆ ಬಾಲಕ ಆ ಸ್ಥಳದಿಂದ 12 ಗಂಟೆ ಪ್ರಯಾಣದ ಕ್ಯಾಲಿಫೋರ್ನಿಯಾಗೆ ಕಾರಿನಲ್ಲಿ ಚಾಲನೆ ಮಾಡುವ ಗುರಿ ಹೊಂದಿದ್ದ ಎಂಬುದು ಸಹ ಅಧಿಕಾರಿಗಳ ಅರಿವಿಗೆ ಬಂದಿದೆ. ಉತಾಹ್ ನ ಪ್ಯಾಟ್ರೋಲಿಂಗ್ ಅಧಿಕಾರಿಗಳು ಬಾಲಕ ಕಾರಿನಲ್ಲಿರುವ ಫೋಟೋವನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...