ಲಾಕ್ ಡೌನ್ ಸಮಯದಲ್ಲಿ ವಿಚಿತ್ರ ಉದ್ಯಮ ಆರಂಭಿಸಿ ಲಕ್ಷ ಲಕ್ಷ ಹಣ ಗಳಿಸಿದೆ ಈ ತಂಡ….! 02-02-2021 4:21PM IST / No Comments / Posted In: Latest News, International ಹಣ ಸಂಪಾದಿಸಬೇಕು ಅಂದರೆ ಅದಕ್ಕೆ ಪ್ಲಾನ್ ಕೂಡ ಚೆನ್ನಾಗಿಯೇ ಮಾಡಬೇಕಾಗುತ್ತೆ. ಅದರಲ್ಲೂ ಕೊರೊನಾ ಇರುವ ಈ ಸಂದರ್ಭದಲ್ಲಿ ಉದ್ಯಮವನ್ನ ಅಭಿವೃದ್ಧಿ ಮಾಡೋದು ಅಂದ್ರೆ ಸುಲಭವಂತೂ ಅಲ್ವೇ ಅಲ್ಲ. ಆದರೆ ಕೆಲ ವ್ಯಕ್ತಿಗಳು ಯಾವ ರೀತಿಯಲ್ಲಿ ಪ್ಲಾನ್ ಮಾಡ್ತಾರೆ ಅಂದರೆ ಅವರಿಗೆ ಕೊರೊನಾ ವೈರಸ್, ಲಾಕ್ಡೌನ್ ಇವೆಲ್ಲ ತಾಕೋದೇ ಇಲ್ಲ. ಅಂದರೆ ನೀವು ಮಾರಾಟ ಮಾಡಬೇಕೆಂದು ಕೊಂಡ ವಸ್ತು, ನಿಮ್ಮ ಕೌಶಲ್ಯ ಇವೆಲ್ಲ ಸರಿಯಿದ್ರೆ ಮಾತ್ರ ಉದ್ಯಮದಲ್ಲಿ ಲಾಭ ಸಾಧ್ಯ. ಆದರೆ ಬ್ರಿಟನ್ನ ಕುರಿ ಸಾಕಣಿಕಾ ಗುಂಪೊಂದು ಹಣ ಮಾಡೋಕೆ ಹಿಡಿದ ದಾರಿ ಕೇಳಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ. ಕ್ರಾಂಕ್ಶಾವ್ ಎಂಬ ಫಾರ್ಮ್ ಒಂದು ಕೊರೊನಾ ಕಾಲದಲ್ಲಿ ಆರಂಭಿಸಿದ ಉದ್ಯಮದಿಂದ ಬರೋಬ್ಬರಿ 50 ಲಕ್ಷ ರೂಪಾಯಿ ಲಾಭ ಗಳಿಸಿದೆ. ಜೂಮ್ ಕಾಲ್ನಲ್ಲಿ ಗ್ರಾಹಕರಿಗೆ ಕುರಿಗಳೊಂದಿಗೆ ಮಾತನಾಡಿಸುವ ಉದ್ಯಮ ಇದಾಗಿದೆ. ನಿಜ ಅಂದರೆ ಈ ಚಟುವಟಿಕೆ ಮೊದಲು ಆರಂಭವಾಗಿದ್ದು ತಮಾಷೆ ತಮಾಷೆಯಾಗಿ. ಈ ಫಾರ್ಮ್ನಲ್ಲಿದ್ದ 7 ಕುರಿಗಳಲ್ಲಿ ಒಂದನ್ನ ಆಯ್ಕೆ ಮಾಡಿಕೊಂಡ ಗ್ರಾಹಕರು ಇದರ ಜೊತೆ ಮಾತನಾಡೋಕೆ (ಅರ್ಥಾತ್ ಆ ರೀತಿಯ ಭಾವನೆಗಾಗಿ) 499.66 ರೂಪಾಯಿ ಪಾವತಿಸಬೇಕಿತ್ತು. ಆದರೆ ಕಡಿಮೆ ಸಮಯದಲ್ಲೇ ಈ ಪ್ಲಾನ್ ಹಿಟ್ ಆಗಿತ್ತು. ಈ ಬಳಿಕ ಫಾರ್ಮ್ ಗ್ರಾಹಕರಿಗೆ ಕುರಿಗಳೊಂದಿಗೆ ಸಂವಾದ ನಡೆಸಲು 5 ನಿಮಿಷಗಳ ಸಮಯವನ್ನ ನಿಗದಿ ಮಾಡಿತ್ತು. ಇದೀಗ ಈ ಉದ್ಯಮ ಫೇಮಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗ್ತಿದೆ. Cuthbert here didn't see the time until it was too late… He's sent you an email to apologise and ask if you'd like to reschedule. He hopes he's still on your bucket list 🐐 pic.twitter.com/zr89rsWnes — Cronkshaw Fold Farm (@CronkshawFold) August 15, 2020 We are absolutely loving sharing our goats with people all over the world – hysterical laughter is the same in every language "WHY IS THERE A GOAT?!" 😂🤣 Simone here has already been to India, Australia and France this morning 🇮🇳🇦🇺🇫🇷🇫🇷😆 pic.twitter.com/ZwTiXx4Mls — Cronkshaw Fold Farm (@CronkshawFold) May 23, 2020