alex Certify ಲಾಕ್ ​ಡೌನ್​ ಸಮಯದಲ್ಲಿ ವಿಚಿತ್ರ ಉದ್ಯಮ ಆರಂಭಿಸಿ ಲಕ್ಷ ಲಕ್ಷ ಹಣ ಗಳಿಸಿದೆ ಈ ತಂಡ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ​ಡೌನ್​ ಸಮಯದಲ್ಲಿ ವಿಚಿತ್ರ ಉದ್ಯಮ ಆರಂಭಿಸಿ ಲಕ್ಷ ಲಕ್ಷ ಹಣ ಗಳಿಸಿದೆ ಈ ತಂಡ….!

ಹಣ ಸಂಪಾದಿಸಬೇಕು ಅಂದರೆ ಅದಕ್ಕೆ ಪ್ಲಾನ್​ ಕೂಡ ಚೆನ್ನಾಗಿಯೇ ಮಾಡಬೇಕಾಗುತ್ತೆ. ಅದರಲ್ಲೂ ಕೊರೊನಾ ಇರುವ ಈ ಸಂದರ್ಭದಲ್ಲಿ ಉದ್ಯಮವನ್ನ ಅಭಿವೃದ್ಧಿ ಮಾಡೋದು ಅಂದ್ರೆ ಸುಲಭವಂತೂ ಅಲ್ವೇ ಅಲ್ಲ.

ಆದರೆ ಕೆಲ ವ್ಯಕ್ತಿಗಳು ಯಾವ ರೀತಿಯಲ್ಲಿ ಪ್ಲಾನ್​ ಮಾಡ್ತಾರೆ ಅಂದರೆ ಅವರಿಗೆ ಕೊರೊನಾ ವೈರಸ್​, ಲಾಕ್​ಡೌನ್​ ಇವೆಲ್ಲ ತಾಕೋದೇ ಇಲ್ಲ. ಅಂದರೆ ನೀವು ಮಾರಾಟ ಮಾಡಬೇಕೆಂದು ಕೊಂಡ ವಸ್ತು, ನಿಮ್ಮ ಕೌಶಲ್ಯ ಇವೆಲ್ಲ ಸರಿಯಿದ್ರೆ ಮಾತ್ರ ಉದ್ಯಮದಲ್ಲಿ ಲಾಭ ಸಾಧ್ಯ.

ಆದರೆ ಬ್ರಿಟನ್​ನ ಕುರಿ ಸಾಕಣಿಕಾ ಗುಂಪೊಂದು ಹಣ ಮಾಡೋಕೆ ಹಿಡಿದ ದಾರಿ ಕೇಳಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ.

ಕ್ರಾಂಕ್​ಶಾವ್​ ಎಂಬ ಫಾರ್ಮ್​ ಒಂದು ಕೊರೊನಾ ಕಾಲದಲ್ಲಿ ಆರಂಭಿಸಿದ ಉದ್ಯಮದಿಂದ ಬರೋಬ್ಬರಿ 50 ಲಕ್ಷ ರೂಪಾಯಿ ಲಾಭ ಗಳಿಸಿದೆ. ಜೂಮ್​ ಕಾಲ್​ನಲ್ಲಿ ಗ್ರಾಹಕರಿಗೆ ಕುರಿಗಳೊಂದಿಗೆ ಮಾತನಾಡಿಸುವ ಉದ್ಯಮ ಇದಾಗಿದೆ.

ನಿಜ ಅಂದರೆ ಈ ಚಟುವಟಿಕೆ ಮೊದಲು ಆರಂಭವಾಗಿದ್ದು ತಮಾಷೆ ತಮಾಷೆಯಾಗಿ. ಈ ಫಾರ್ಮ್​ನಲ್ಲಿದ್ದ 7 ಕುರಿಗಳಲ್ಲಿ ಒಂದನ್ನ ಆಯ್ಕೆ ಮಾಡಿಕೊಂಡ ಗ್ರಾಹಕರು ಇದರ ಜೊತೆ ಮಾತನಾಡೋಕೆ (ಅರ್ಥಾತ್‌ ಆ ರೀತಿಯ ಭಾವನೆಗಾಗಿ) 499.66 ರೂಪಾಯಿ ಪಾವತಿಸಬೇಕಿತ್ತು.

ಆದರೆ ಕಡಿಮೆ ಸಮಯದಲ್ಲೇ ಈ ಪ್ಲಾನ್​ ಹಿಟ್​ ಆಗಿತ್ತು. ಈ ಬಳಿಕ ಫಾರ್ಮ್​ ಗ್ರಾಹಕರಿಗೆ ಕುರಿಗಳೊಂದಿಗೆ ಸಂವಾದ ನಡೆಸಲು 5 ನಿಮಿಷಗಳ ಸಮಯವನ್ನ ನಿಗದಿ ಮಾಡಿತ್ತು. ಇದೀಗ ಈ ಉದ್ಯಮ ಫೇಮಸ್​ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿಯಾಗ್ತಿದೆ.

— Cronkshaw Fold Farm (@CronkshawFold) August 15, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...