alex Certify ಹೊಸ ವರ್ಷದಂದು ಟೈಮ್ಸ್‌ ಸ್ಕ್ವೇರ್‌ ಖಾಲಿ ಖಾಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷದಂದು ಟೈಮ್ಸ್‌ ಸ್ಕ್ವೇರ್‌ ಖಾಲಿ ಖಾಲಿ…!

ಸಾಮಾನ್ಯವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನ್ಯೂ ಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ಬಳಿ ಲಕ್ಷೋಪಲಕ್ಷ ಮಂದಿ ನೆರೆದಿರುತ್ತಾರೆ. ಬರಿ ಅಮೆರಿಕದಿಂದ ಮಾತ್ರವಲ್ಲ, ಜಗತ್ತಿನ ನಾನಾ ಮೂಲೆಗಳಿಂದ ಜನರು ಈ ನಗರಕ್ಕೆ ಭೇಟಿ ಕೊಡುತ್ತಾರೆ.

ಡಿಸೆಂಬರ್‌ 31ರ ಮಧ್ಯರಾತ್ರಿ ಸಂಭ್ರಮದಲ್ಲಿ ಮುಳುಗಿಬಿಡುವ ನ್ಯೂಯಾರ್ಕ್‌ನ ಈ ಸ್ಕ್ವೇರ್‌ ಈ ಬಾರಿ ಭಣಗುಡುತ್ತಿದೆ.

ಆದರೆ ಹಿಂದಿನ ವರ್ಷಗಳಲ್ಲಿ ಕಂಡು ಬರುತ್ತಿದ್ದ ಚಟುವಟಿಕೆಗಳು ಈ ಮಾಯಾನಗರಿಯಲ್ಲಿ ಈ ಬಾರಿ ಕಾಣದಂತೆ ಆಗಿವೆ. ಕೋವಿಡ್-19 ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದೇ ಇರುವ ಕಾರಣದಿಂದ ಲಾಕ್‌ಡೌನ್‌ ಪರಿಸ್ಥಿತಿ ಹೊಸ ವರ್ಷದ ಆಚರಣೆಯ ಮೇಲೂ ತನ್ನ ಪ್ರಭಾವ ಬೀರಿದೆ.

ಸದಾ ಗಿಜಿಗುಡುವ ಈ ಚೌಕದ ಬಳಿ ಪೊಲೀಸ್ ಕಾರುಗಳನ್ನು ಬಿಟ್ಟರೆ ಒಬ್ಬೇ ಒಬ್ಬ ವ್ಯಕ್ತಿಯೂ ಇಲ್ಲದ ಇರುವ ಕಾರಣ ಬಿಕೋ ಎನ್ನುತ್ತಿದ್ದು, ನೀರವತೆಯ ದೃಶ್ಯಗಳು ವೈರಲ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...