alex Certify ವಿಚಿತ್ರ: ಸೆಕ್ಸ್ ಡಾಲ್‌ ಜೊತೆ ಬಾಡಿ ಬಿಲ್ಡರ್‌ ವಿವಾಹ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ: ಸೆಕ್ಸ್ ಡಾಲ್‌ ಜೊತೆ ಬಾಡಿ ಬಿಲ್ಡರ್‌ ವಿವಾಹ…!

ಕಜಕ್​ಸ್ತಾನದ ಬಾಡಿ ಬಿಲ್ಡರ್​ ಒಬ್ಬ ಸೆಕ್ಸ್​ ಡಾಲ್​​ನೊಂದಿಗೆ ವಿವಾಹವಾಗಿದ್ದಾರೆ. 2019ರ ಡಿಸೆಂಬರ್​​ನಲ್ಲಿ ಗೊಂಬೆಗೆ ಪ್ರಪೋಸ್​ ಮಾಡಿದ್ದ ಬಾಡಿ ಬಿಲ್ಡರ್​ ಇದೀಗ ಇದೇ ಗೊಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಗೊಂಬೆ ಹಾಗೂ ಬಾಡಿ ಬಿಲ್ಡರ್​ನ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.‌

ಯೂರಿ ಟೊಲೊಚ್ಕೊ ಎಂಬ ಹೆಸರಿನ ಬಾಡಿ ಬಿಲ್ಡರ್​ ಮಾರ್ಗೊ ಎಂಬ ಸಿಲಿಕಾನ್​ ಗೊಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ ತಿಂಗಳಲ್ಲೇ ನಡೆಯಬೇಕಿದ್ದ ಈ ಮದುವೆ ಕೊರೊನಾ ಕಾರಣದಿಂದಾಗಿ ಅಕ್ಟೋಬರ್​ಗೆ ಮುಂದೂಡಲ್ಪಟ್ಟಿತ್ತು.

ಆದರೆ ಅಕ್ಟೋಬರ್​ನಲ್ಲಿ ಸಲಿಂಗಿಗಳ ರ್ಯಾಲಿ ವೇಳೆ ಯೂರಿ ಮೇಲೆ ದಾಳಿ ನಡೆಯಲ್ಪಟ್ಟಿತು. ಈ ಎಲ್ಲ ಅಡಚಣೆಗಳ ಬಳಿಕ ಕೊನೆಗೂ ನವೆಂಬರ್ ತಿಂಗಳಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಾಧ್ಯಮಗಳ ವರದಿ ಪ್ರಕಾರ ಮಾರ್ಗೋ ಹಾಗೂ ಯೂರಿ ಕಳೆದ 8 ತಿಂಗಳಿನಿಂದ ಸಂಬಂಧದಲ್ಲಿದ್ದಾರೆ. ಮಾರ್ಗೋನನ್ನ ಕ್ಲಿನಿಕ್​​ಗೆ ಕರೆದುಕೊಂಡು ಹೋಗಿದ್ದ ಯೂರಿ ಅದರ ದೇಹದಲ್ಲಿ ಕೆಲ ಬದಲಾವಣೆಗಳನ್ನ ಮಾಡಿದ್ದರು.

View this post on Instagram

A post shared by OddJack / Юрий Толочко (@yurii_tolochko)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...