alex Certify ಶಾಕಿಂಗ್​: ಬ್ರೀಫ್​ಕೇಸ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಬ್ರೀಫ್​ಕೇಸ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಹಿಳೆ…!

ನಿರ್ಜೀವ ವಸ್ತುಗಳ ಮೇಲೆ ಹೆಚ್ಚು ಆಕರ್ಷಣೆ ಹೊಂದಿದ್ದ ಮಹಿಳೆ ಬ್ರೀಫ್​ಕೇಸ್​ ಜೊತೆ ವಿವಾಹವಾದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಆಕೆ ಬ್ರೀಫ್​ಕೇಸ್​ನ್ನ ತನ್ನ ಮಾರ್ಗದರ್ಶಕ ಎಂದು ನಂಬಿದ್ದಾಳೆ.

ನಿರ್ಜಿವ ವಸ್ತುಗಳ ಮೇಲೆ ಆಕರ್ಷಣೆ ಅಥವಾ ಅವುಗಳ ಜೊತೆ ಲೈಂಗಿಕ ಕ್ರಿಯೆ ನಡೆಸಲು ಆಸಕ್ತಿ ಹೊಂದೋದನ್ನ ಆಬ್ಜೆಕ್ಟೊಫಿಲಿಯಾ ಅಥವಾ ಆಬ್ಜೆಕ್ಟ್​ ಸೆಕ್ಸುವ್ಯಾಲಿಟಿ ಎಂದು ಕರೆಯಲಾಗುತ್ತೆ. ಈ ಗುಣವನ್ನ ಹೊಂದಿರುವ ಮನುಷ್ಯರು ನಿರ್ಜೀವ ವಸ್ತುಗಳ ಮೇಲೆ ಅತಿಯಾದ ಒಲವನ್ನ ಹೊಂದಿರುತ್ತಾರೆ.

ಮಾಸ್ಕೋ ಮೂಲದ ರೈನ್​ ಗಾರ್ಡನ್​ ಕೂಡ ಬ್ರೀಫ್​ಕೇಸ್​ನತ್ತ ಹೆಚ್ಚು ಆಕರ್ಷಣೆಯನ್ನ ಹೊಂದಿದ್ದಳು . ಹಾಗೂ ಆಕೆ ಅಂತಿಮವಾಗಿ ಬ್ರೀಫ್​ಕೇಸ್​ನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.

24 ವಯಸ್ಸಿನ ರೈನ್​ ಈ ಹಿಂದೆ ಪುರುಷನೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಆಕೆಗೆ ಯಾವಾಗಲು ಮನುಷ್ಯರಗಿಂತ ಜಾಸ್ತಿ ನಿರ್ಜೀವ ವಸ್ತುಗಳ ಜೊತೆ ಕಾಲ ಕಳೆಯುವುದೇ ಹೆಚ್ಚು ಇಷ್ಟವಾಗುತ್ತಿತ್ತಂತೆ. ಆಗಸ್ಟ್ 2015 ರಲ್ಲಿ ಹಾರ್ಡ್​ವೇರ್​ ಶಾಪ್​ನಲ್ಲಿದ್ದ ಬ್ರೀಫ್​ಕೇಸ್​ನ್ನ ರೈನ್​ ಮೊದಲ ಬಾರಿ ಕಂಡಿದ್ದಾಳೆ. ಅಲ್ಲಿಂದ ಅವಳು ಈ ಬ್ರೀಫ್​​ಕೇಸ್​ ಜೊತೆ ಅತಿಯಾದ ಆಕರ್ಷಣೆಯನ್ನ ಹೊಂದಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...