alex Certify ಶಿಶ್ನ ನಿಮಿರುವಿಕೆಗೆ ಬಳಸುವ ಕ್ರೀಂನ್ನು ತುಟಿಗೆ ಹಚ್ಚಿಕೊಂಡ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಶ್ನ ನಿಮಿರುವಿಕೆಗೆ ಬಳಸುವ ಕ್ರೀಂನ್ನು ತುಟಿಗೆ ಹಚ್ಚಿಕೊಂಡ ಭೂಪ..!

ಚೀನಾ ಮೂಲದ ಟಿಕ್​ಟಾಕ್​ ಅಪ್ಲಿಕೇಶನ್​ ಮೂಲಕ ತಮ್ಮ ಪ್ರತಿಭೆ ಪ್ರದರ್ಶನ ಮಾಡುವವರ ಗುಂಪು ಒಂದೆಡೆಯಾದ್ರೆ ವಿಚಿತ್ರ ಕೆಲಸ ಮಾಡೋದ್ರ ಮೂಲಕ ಸುದ್ದಿಯಾಗೋ ಮಂದಿಯೇ ಇನ್ನೊಂದು ಕಡೆ.

ಸದ್ಯ ಟಿಕ್​ಟಾಕ್​ನಲ್ಲಿ ಎರೆಕ್ಷನ್​ ಕ್ರೀಮ್​​ಗಳನ್ನ ಬಳಸಿ ತುಟಿಗಳ ಗಾತ್ರವನ್ನ ಹೆಚ್ಚಿಸುವ ವಿಡಿಯೋವೊಂದು ಭಾರೀ ಟ್ರೆಂಡ್ ಕ್ರಿಯೇಟ್​ ಮಾಡಿತ್ತು. ಆದರೆ ಈ ರೀತಿ ಮಾಡಿದ್ರೆ ಆರೋಗ್ಯಕ್ಕೆ ತುಂಬಾನೇ ಹಾನಿಕಾರಕ ಅಂತಾ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಟಿಕ್​ಟಾಕ್​ ವಿಡಿಯೋದಲ್ಲಿ ಜೆರ್ರಿ ಮಾಲ್​ ಎಂಬ ವ್ಯಕ್ತಿ ಶಿಶ್ನದ ಗಾತ್ರಗಳನ್ನ ಹೆಚ್ಚಿಸಲು ಬಳಕೆ ಮಾಡುವ ಕ್ರೀಮ್​ನ ತುಟಿಗೆ ಹಚ್ತಾ ಇರೋದನ್ನ ನೀವು ಕಾಣಬಹುದಾಗಿದೆ. ಸಂಪೂರ್ಣ ತುಟಿಗೆ ಕ್ರೀಂ ಹಚ್ಚಿದ ಬಳಿಕ ಮಾತನಾಡುವ ಜೆರ್ರಿ ತನಗೆ ಝುಂ ಎಂಬ ಅನುಭವಾಗುತ್ತೆ ಎಂದು ಹೇಳಿಕೊಳ್ಳುತ್ತಾನೆ. ಯಾವುದೋ ಒಂದು ಸಿನಿಮಾದಲ್ಲಿ ನಟಿಯೊಬ್ಬಳು ಇದೇ ರೀತಿ ಎರೆಕ್ಷನ್​ ಕ್ರೀಂನ್ನು ತುಟಿಗೆ ಹಚ್ಚಿಕೊಂಡು ತುಟಿಯ ಗಾತ್ರ ಹೆಚ್ಚಿಸಿಕೊಂಡಿದ್ದಳಂತೆ. ಈ ಸನ್ನಿವೇಶದಿಂದ ಸ್ಪೂರ್ತಿಗೊಂಡು ನಾನು ಈ ಕೆಲಸ ಮಾಡಿದ್ದೇನೆ ಎಂದು ಟಿಕ್​ಟಾಕರ್​ ಹೇಳುತ್ತಾನೆ. ಅಲ್ಲದೇ ಈ ಕ್ರೀಂ ಹಚ್ಚಿದ ಬಳಿಕ ಆತನಿಗೆ ತುಟಿ ಉರಿದ ಅನುಭವವೂ ಆಗಿದೆ.

ಈ ವಿಡಿಯೋ ಸಾಕಷ್ಟು ವೈರಲ್​ ಆಗಿ ಟ್ರೆಂಡ್​ ಕ್ರಿಯೇಟ್​ ಮಾಡಿದ ಬಳಿಕ ವೈದ್ಯರು ಈ ರೀತಿ ಎರೆಕ್ಷನ್​ ಕ್ರೀಂಗಳನ್ನ ತುಟಿಗೆ ಬಳಸೋದು ಹಾನಿಕಾರಕ ಎಂದು ಎಚ್ಚರಿಕೆ ನೀಡಿದ್ದಾರೆ. ಇದೊಂದು ಮೂರ್ಖತನದ ಕೆಲಸವಾಗಿದೆ. ಈ ರೀತಿ ಎರೆಕ್ಷನ್​ ಕ್ರೀಂಗಳನ್ನ ತುಟಿಗೆ ಬಳಸಿದ್ರೆ ತುಟಿಗಳಲ್ಲಿ ಗುಳ್ಳೆ ಉಂಟಾಗಬಹುದು, ತುಟಿಯ ಚರ್ಮವೇ ಕಿತ್ತು ಹೋಗಬಹುದು ಇಲ್ಲವೇ ತುಟಿ ಊದುಕೊಳ್ಳೋದ್ರ ಜೊತೆಗೆ ನೋವು ಉಂಟು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...