alex Certify ಶ್ವಾನದಂತೆ ನಟಿಸುವ ಯುವತಿಯಿಂದ ವರ್ಷಕ್ಕೆ 95 ಲಕ್ಷ ರೂ. ಕಮಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದಂತೆ ನಟಿಸುವ ಯುವತಿಯಿಂದ ವರ್ಷಕ್ಕೆ 95 ಲಕ್ಷ ರೂ. ಕಮಾಯಿ…!

ಈ ಸ್ಮಾರ್ಟ್‌ಫೋನ್‌ ಇಂಟರ್ನೆಟ್ ಸೇವೆಗಳು ಎಲ್ಲರಿಗೂ ಸರಳವಾಗಿ ಸಿಗುತ್ತಿರುವ ಕಾಲಘಟ್ಟದಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರ ವಿಚಿತ್ರ ಕೆಲಸಗಳನ್ನು ಮಾಡಿಕೊಂಡು ಸುದ್ದಿ ಮಾಡುವುದು ದೊಡ್ಡ ವಿಚಾರವೇನಲ್ಲ.

ಇಂಥ ಅನೇಕ ನಿದರ್ಶನಗಳಲ್ಲಿ ಇದೂ ಒಂದು: 21 ವರ್ಷದ ಜೆಯನ್ನಾ ಫಿಲಿಪ್ಸ್‌ ಹೆಸರಿನ ಯುವತಿಯೊಬ್ಬರು ನಾಯಿ ಮರಿಗಳಂತೆ ಆಕ್ಟಿಂಗ್ ಮಾಡುವ ಮೂಲಕ ಪ್ರತಿ ವರ್ಷ£100,000ಗಳಷ್ಟು ಹಣವನ್ನು ಜೇಬಿಗಿಳಿಸುತ್ತಿದ್ದಾರೆ.

ಥೇಟ್ ನಾಯಿಯಂತೆ ನೆಲದ ಮೇಲೆ ಹೊರಳಾಡುವುದು, ಚೆಂಡನ್ನು ಚೇಸ್ ಮಾಡುವುದು, ನೀರು ಕುಡಿಯುವುದನ್ನೆಲ್ಲಾ ಮಾಡಿಕೊಂಡು, ಟಿಕ್‌-ಟಾಕ್ ಹಾಗೂ ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಆಗಿರುವ ಈಕೆಯ ವಾರ್ಷಿಕ ಆದಾಯ 95 ಲಕ್ಷ ರೂ.ಗಳಷ್ಟಿದೆ.

ಸದ್ಯ 1,20,000 ಫಾಲೋವರ್‌ಗಳನ್ನು ಟಿಕ್‌ಟಾಕ್‌ನಲ್ಲಿ ಹೊಂದಿರುವ ಈಕೆಗೆ ಕಂಟೆಂಟ್ ನೋಡಲು ಚಂದಾದಾರು ಪ್ರತಿ ತಿಂಗಳು $20ಗಳಷ್ಟು ಪಾವತಿ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...