alex Certify ಕುತೂಹಲಕ್ಕೆ ಕಾರಣವಾಗಿದ್ದಾನೆ ವಿಮಾನಕ್ಕೆ ಸರಿಸಮನಾಗಿ ಹಾರಾಟ ನಡೆಸಿದ ಮಾನವ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕ್ಕೆ ಕಾರಣವಾಗಿದ್ದಾನೆ ವಿಮಾನಕ್ಕೆ ಸರಿಸಮನಾಗಿ ಹಾರಾಟ ನಡೆಸಿದ ಮಾನವ…!

ಲಾಸ್ ಏಂಜಲೀಸ್: ಸಿನೆಮಾ, ಟಿವಿ ಸೀರಿಯಲ್ ಗಳಲ್ಲಿ ಮಾತ್ರ ಕಾಣುವ ವಿಚಿತ್ರ ದೃಶ್ಯ ಅಮೆರಿಕದಲ್ಲಿ ನಿಜವಾಗಿದೆ. ಆಗಸದಲ್ಲಿ ವಿಮಾನಕ್ಕೆ ಸರಿ ಸಮನಾಗಿ ವ್ಯಕ್ತಿಯೊಬ್ಬ ಹಾರಾಟ ನಡೆಸಿದ್ದನ್ನು ಅಲ್ಲಿನ ಪೈಲಟ್ ಗಳು ಗುರುತಿಸಿದ್ದಾರೆ.

ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ ಗೆ ಅಮೆರಿಕನ್‌ ಏರ್ ಲೈನ್ಸ್ ನ ಎರಡು ಪ್ರತ್ಯೇಕ ವಿಮಾನಗಳ ಪೈಲಟ್ ಗಳು ಭಾನುವಾರ ಸಂಜೆ 6.30 ರ ಹೊತ್ತಿಗೆ ವಾಯ್ಸ್ ಮೆಸೇಜ್ ಕಳಿಸಿದ್ದಾರೆ. 3 ಸಾವಿರ ಅಡಿ ಎತ್ತರದಲ್ಲಿ ಫ್ಲೈಯಿಂಗ್ ಜಾಕೆಟ್ ಹಾಕಿದ ಅಪರಿಚಿತ ವ್ಯಕ್ತಿ ಹಾರುತ್ತಿದ್ದಾನೆ ಎಂದು ತಿಳಿಸಿದ್ದಾರೆ.

ಅಮೆರಿಕನ್ 1997 ಎಂಬ ವಿಮಾನದ ಪೈಲಟ್, “3 ಸಾವಿರ ಅಡಿ ಎತ್ತರದಲ್ಲಿ ನಮ್ಮ ವಿಮಾನದ ಎಡಕ್ಕೆ ಕೇವಲ 30 ಯಾರ್ಡ್ ದೂರದಲ್ಲಿ ಒಬ್ಬ ಹಾದು ಹೋದ” ಎಂದು ವರದಿ ನೀಡಿದ್ದಾರೆ. ಹಾಗೂ ಜೆಟ್ ಬ್ಲ್ಯೂ – 23 ಎಂಬ ವಿಮಾನ ಪೈಲಟ್ ಸಹ ಇದೇ ವರದಿ ನೀಡಿದ್ದಾರೆ. ಹೀಗೆ ಹಾರಿದವರು ಯಾರು ಎಂಬ ಬಗ್ಗೆ ಈಗ ತನಿಖೆ ಶುರುವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...