alex Certify BIG NEWS: ಕೋವಿಡ್​ 19 ಸಂಬಂಧಿತ ಸಾರ್ವಜನಿಕ ಪೋಸ್ಟ್​ ವಿಚಾರದಲ್ಲಿ ಫೇಸ್​ಬುಕ್​ನಿಂದ ಮಹತ್ವದ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್​ 19 ಸಂಬಂಧಿತ ಸಾರ್ವಜನಿಕ ಪೋಸ್ಟ್​ ವಿಚಾರದಲ್ಲಿ ಫೇಸ್​ಬುಕ್​ನಿಂದ ಮಹತ್ವದ ಬದಲಾವಣೆ

ಸಾಮಾಜಿಕ ಮಾಧ್ಯಮದ ದೈತ್ಯ ಫೇಸ್​ಬುಕ್​ ಕೋವಿಡ್​ 19 ಸಂಬಂಧಿಸಿದ ವಿಷಯಗಳ ಮೇಲೆ ಹೇರಿದ್ದ ನಿರ್ಬಂಧವನ್ನ ತೆಗೆದುಹಾಕಿದೆ.

ಈ ನಿರ್ಬಂಧ ತೆರವುಗೊಳಿಸಿದ ಬಳಿಕ ಕೋವಿಡ್,​ ಲ್ಯಾಬ್​​ನಲ್ಲಿ ನಿರ್ಮಾಣವಾಗಿದ್ದು ಎಂಬ ಮಾತಿಗೆ ಪುಷ್ಠಿ ನೀಡುವಂತಹ ಪೋಸ್ಟ್​ಗಳ ವರದಿಗೆ ಅವಕಾಶ ನೀಡಿದೆ.

ಕೋವಿಡ್​ 19 ಮೂಲದ ವಿಚಾರವಾಗಿ ನಡೆಯುತ್ತಿರುವ ತನಿಖೆ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಕೋವಿಡ್​ 19 ಮಾನವ ನಿರ್ಮಿತ ವೈರಸ್​ ಎಂಬ ವಾದಕ್ಕೆ ಸಂಬಂಧಿಸಿದ ಪೋಸ್ಟ್​​ಗಳನ್ನ ಫೇಸ್​ಬುಕ್​ನಿಂದ ತೆಗೆದು ಹಾಕೋದಿಲ್ಲ ಎಂದು ಕಂಪನಿ ಹೇಳಿದೆ.

ಅಲ್ಲದೇ ಕೋವಿಡ್​ 19 ವಿಚಾರವಾಗಿ ನಾವು ನಿರಂತರವಾಗಿ ಆರೋಗ್ಯ ತಜ್ಞರ ಸಂಪರ್ಕದಲ್ಲಿ ಇರುತ್ತೇವೆ. ಕೋವಿಡ್​ 19 ಬಗ್ಗೆ ಹೊಸ ಹೊಸ ಮಾಹಿತಿಗಳು ತಿಳಿಯುತ್ತಿದ್ದಂತೆಯೇ ಫೇಸ್​ಬುಕ್​ನ ಷರತ್ತು ಹಾಗೂ ನಿಯಮಗಳು ಬದಲಾಗಲಿವೆ ಎಂದೂ ಹೇಳಿದೆ.

ಡಿಸೆಂಬರ್​ ತಿಂಗಳಲ್ಲಿ ಫೇಸ್​ಬುಕ್​ ಕೊರೊನಾ ವೈರಸ್​ ಲಸಿಕೆಗಳ ಕುರಿತಾದ ಸುಳ್ಳು ಮಾಹಿತಿಯನ್ನ ಹೊಂದಿರುವ ಪೋಸ್ಟ್​ಗಳಿಗೆ ಲಗಾಮು ಹಾಕಿತ್ತು.

ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಕೋವಿಡ್​ 19 ವೈರಸ್​ ಪ್ರಾಣಿ ಮೂಲದಿಂದ ಬಂದಿದ್ದೋ ಅಥವಾ ಲ್ಯಾಬ್​ನಿಂದ ಬಂದಿದ್ದೋ ಎಂಬುದನ್ನ ಪತ್ತೆ ಮಾಡುವಂತೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...