alex Certify ಆಯತಪ್ಪಿ ಪಾಪಾಸ್​ ಕಳ್ಳಿ ಮೇಲೆ ಬಿದ್ದ ಸೈಕ್ಲಿಸ್ಟ್……ಮುಂದೆ ಆಗಿದ್ದೇನು ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯತಪ್ಪಿ ಪಾಪಾಸ್​ ಕಳ್ಳಿ ಮೇಲೆ ಬಿದ್ದ ಸೈಕ್ಲಿಸ್ಟ್……ಮುಂದೆ ಆಗಿದ್ದೇನು ನೋಡಿ…!

ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ಹವ್ಯಾಸಿ ಸೈಕ್ಲಿಸ್ಟ್​ ನಿಯಂತ್ರಣ ತಪ್ಪಿ ಪಾಪಾಸ್​ ಕಳ್ಳಿ ಗಿಡದ ಮೇಲೆ ಬಿದ್ದ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ.

ಅರ್ಜೆಂಟೀನಾ ರಾಜಧಾನಿ ಬ್ಯೂನಸ್​ನ ಸಿಟಿ ಪಾರ್ಕ್​ ಪ್ರದೇಶದಲ್ಲಿ ಡಿಯಾಗೋ ಮೊರೆನೋ ಸೈಕಲ್​ ಸವಾರಿ ಮಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ಗುಂಡಿಯನ್ನ ಗುರುತಿಸುವಲ್ಲಿ ಡಿಯಾಗೋ ವಿಫಲರಾದ ಹಿನ್ನೆಲೆ ಆಯ ತಪ್ಪಿ ಪಾಪಾಸ್​ ಕಳ್ಳಿ ಗಿಡದ ಮೇಲೆ ಬಿದ್ದಿದ್ದಾರೆ.

ಡಿಯಾಗೋ ಮೈ ತುಂಬಾ ಪಾಪಾಸ್​ ಕಳ್ಳಿ ಮುಳ್ಳು ಅಂಟಿರೋದನ್ನ ವಿಡಿಯೋದಲ್ಲಿ ನೀವು ನೋಡಬಹುದಾಗಿದೆ. ಹೆಲ್ಮೆಟ್​ ಧರಿಸಿದ್ದರಿಂದ ಡಿಯಾಗೋ ಮುಖಕ್ಕೆ ಹಾಗೂ ತಲೆಗೆ ಯಾವುದೇ ಗಾಯಗಳಾಗಿಲ್ಲ. ಡಿಯಾಗೋರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...