alex Certify ಬರೋಬ್ಬರಿ 82 ವರ್ಷಗಳ ಹಿಂದೆ ಲೈಬ್ರರಿಯಿಂದ ಪಡೆದಿದ್ದ ಪುಸ್ತಕ ಕೊನೆಗೂ ವಾಪಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 82 ವರ್ಷಗಳ ಹಿಂದೆ ಲೈಬ್ರರಿಯಿಂದ ಪಡೆದಿದ್ದ ಪುಸ್ತಕ ಕೊನೆಗೂ ವಾಪಸ್…!

ಪುಸ್ತಕ ಪ್ರಿಯರಿಗೆ ಗ್ರಂಥಾಲಯ ಪವಿತ್ರ ಸ್ಥಳವಿದ್ದಂತೆ. ಮಿಲಿಯನ್​​ಗಟ್ಟಲೇ ಪುಸ್ತಕಗಳನ್ನ ಹೊಂದಿರುವ ಗ್ರಂಥಾಲಯಗಳಲ್ಲಿ ಯಾವುದನ್ನ ಆಯ್ಕೆ ಮಾಡಬೇಕು ಅನ್ನೋದೇ ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಅಲ್ಲದೇ ಕೊಂಡ ಪುಸ್ತಕವನ್ನ ನಿಗದಿತ ಸಮಯಕ್ಕೆ ಹಿಂದಿರುಗಿಸೋದು ಕೂಡ ಎಲ್ಲರ ಕೈಯಿಂದ ಆಗುವ ಕೆಲಸವಲ್ಲ.

ಕೆಲವೊಬ್ಬರು ಈ ವಿಚಾರದಲ್ಲಿ ತುಂಬಾನೇ ಕಟ್ಟುನಿಟ್ಟಾಗಿ ಇರುತ್ತಾರೆ. ಸರಿಯಾದ ಸಮಯಕ್ಕೆ ಪುಸ್ತಕಗಳನ್ನ ಹಿಂದಿರುಗಿಸುತ್ತಾರೆ. ಆದರೆ ಇನ್ನೂ ಕೆಲ ಜನರು ವರ್ಷ ಕಳೆದರೂ ಪುಸ್ತಕಗಳನ್ನ ವಾಪಾಸ್​ ಮಾಡುವ ಗೋಜಿಗೇ ಹೋಗೋದಿಲ್ಲ.

ಇಂತಹದ್ದೇ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೆನಡಾದ ಲೈಬ್ರರಿಯೊಂದರಲ್ಲಿ ಬರೋಬ್ಬರಿ 82 ವರ್ಷಗಳ ಬಳಿಕ ಪುಸ್ತಕವನ್ನ ವಾಪಸ್​ ಮಾಡಲಾಗಿದೆ..!

ಟಿಯಾಗೋದ ಸೀಮಿತ ಎಡಿಷನ್‌ ನ ಹೊಸ ಕಾರು ಲಾಂಚ್

ಜಾರ್ಡನ್​ ಮುಸೈಸೈನ್​ ಎಂಬವರು ತಮ್ಮ ಮನೆಯಲ್ಲಿ ಹಳೆಯ ಪುಸ್ತಕವೊಂದನ್ನ ಕಂಡಿದ್ದರು. ಅಲ್ಲದೇ ಇದನ್ನ ಲೈಬ್ರರಿಯೊಂದ ತಂಡ ಪುಸ್ತಕ ಅನ್ನೋದು ತಿಳಿದು ಬಂದಿದೆ. ಆದರೆ ಈ ಪುಸ್ತಕವನ್ನ ಬರೋಬ್ಬರಿ 82 ವರ್ಷಗಳ ಹಿಂದೆ ಈ ಲೈಬ್ರರಿಯಿಂದ ಎರವಲು ಪಡೆಯಲಾಗಿತ್ತು.

ಇನ್ನು ಈ ವಿಚಾರವಾಗಿ ಮಾತನಾಡಿದ ಮುಸೈಸೈನ್​, ನಾವು ಸ್ನಾನಗೃಹದಲ್ಲಿ ಫ್ಯಾನ್​ವೊಂದನ್ನ ಫಿಕ್ಸ್ ಮಾಡುತ್ತಿದ್ದೆವು. ಹೀಗಾಗಿ ನಮಗೆ ಮೇಲ್ಛಾವಣಿಯಲ್ಲಿ ರಂಧ್ರ ಮಾಡಬೇಕಾಗಿ ಬಂತು. ಈ ವೇಳೆ ನಮಗೆ ಹಳೆಯ ಪುಸ್ತಕಗಳು ಸಿಕ್ಕವು ಎಂದು ಹೇಳಿದ್ದಾರೆ.

ಈ ಪುಸ್ತಕವನ್ನ ಲೈಬ್ರರಿಯಿಂದ 1929ರಲ್ಲಿ ಪುಟ್ಟ ಹುಡುಗಿಯೊಬ್ಬಳು ಎರವಲು ಪಡೆದಿದ್ದರು. ಮಾರ್ಚ್ ಹಾಗೂ ಮೇನಲ್ಲಿ ಈ ಪುಸ್ತಕದ ಹಿಂತಿರುಗುವ ಅವಧಿಯನ್ನ ನವೀಕರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...