alex Certify ಟಿಯಾಗೋದ ಸೀಮಿತ ಎಡಿಷನ್‌ ನ ಹೊಸ ಕಾರು ಲಾಂಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಯಾಗೋದ ಸೀಮಿತ ಎಡಿಷನ್‌ ನ ಹೊಸ ಕಾರು ಲಾಂಚ್

ಬಹಳ ಜನಪ್ರಿಯವಾಗಿರುವ ತನ್ನ ಹ್ಯಾಚ್‌ಬ್ಯಾಕ್ ಟಿಯಾಗೋ ಕಾರಿನ ಸೀಮಿತ ಎಡಿಷನ್‌ ಒಂದನ್ನು ಟಾಟಾ ಬಿಡುಗಡೆ ಮಾಡಿದೆ.

ಟ್ವಿಟರ್‌‌ನ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಟಾಟಾ ಈ ಕಾರಿನ ಹೊಸ ವರ್ಶನ್‌ನ ಟೀಸರ್‌ ಬಿಡುಗಡೆ ಮಾಡಿದೆ. ಜನವರಿ 30, 2020ರಲ್ಲಿ ಹಿಂದಿನ ವರ್ಶನ್‌ನ ಟಿಯಾಗೋ ಕಾರನ್ನು ಟಾಟಾ ಬಿಡುಗಡೆ ಮಾಡಿತ್ತು. ಸರಿಯಾಗಿ ವರ್ಷದ ಬಳಿಕ ಮತ್ತೊಂದು ವರ್ಶನ್ ‌ಅನ್ನು ಟಾಟಾ ಬಿಡುಗಡೆ ಮಾಡಿದೆ.

ಏನಿದು ಮಿಂತ್ರಾ ಲೋಗೋ ವಿವಾದ…? ಇಲ್ಲಿದೆ ನೋಡಿ ಸಂಪೂರ್ಣ ಪ್ರಕರಣದ ಮಾಹಿತಿ

ಬಹಳ ಸ್ಫರ್ಧಾತ್ಮಕವಾದ ಬೆಲೆಯ ಹ್ಯಾಚ್‌ಬ್ಯಾಕ್‌ಗಳ ಸೆಗ್‌ಮೆಂಟ್‌ನಲ್ಲಿ, ಟಿಯಾಗೂ ಮೂಲಕ ತನ್ನದೇ ಸ್ಥಾನಮಾನ ಸೃಷ್ಟಿ ಮಾಡಿಕೊಂಡಿರುವ ಟಾಟಾ ಈ ಹೊಸ ಸೀಮಿತ ಎಡಿಷನ್ ‌ಅನ್ನು 5.79 ಲಕ್ಷ ರೂ.ಗಳ ಎಕ್ಸ್‌ಶೋ ರೂಂ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

ಟಿಯಾಗೋ ಎಕ್ಸ್‌ಟಿ ಎಡಿಶನ್‌ನ ಈ ಕಾರುಗಳಲ್ಲಿ 14 ಇಂಚಿನ ಅಲಾಯ್ ಚಕ್ರಗಳು, ಬೋಲ್ಡ್ ಆಗಿರುವ ಹಿಂಬದಿ ಬಣ್ಣ, ಮ್ಯಾನುವಲ್ ಗೇರ್‌ಬಾಕ್ಸ್‌ಗಳು ಇರಲಿವೆ. ಮೂರು ಬಣ್ಣಗಳಲ್ಲಿ — ಫ್ಲೇಂ ಕೆಂಪು, ಡೇಟೋನಾ ಗ್ರೇ ಹಾಗೂ ಬಿಳಿ — ಕಾರು ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...