ಬರೋಬ್ಬರಿ 82 ವರ್ಷಗಳ ಹಿಂದೆ ಲೈಬ್ರರಿಯಿಂದ ಪಡೆದಿದ್ದ ಪುಸ್ತಕ ಕೊನೆಗೂ ವಾಪಸ್…! 31-01-2021 11:00AM IST / No Comments / Posted In: Latest News, International ಪುಸ್ತಕ ಪ್ರಿಯರಿಗೆ ಗ್ರಂಥಾಲಯ ಪವಿತ್ರ ಸ್ಥಳವಿದ್ದಂತೆ. ಮಿಲಿಯನ್ಗಟ್ಟಲೇ ಪುಸ್ತಕಗಳನ್ನ ಹೊಂದಿರುವ ಗ್ರಂಥಾಲಯಗಳಲ್ಲಿ ಯಾವುದನ್ನ ಆಯ್ಕೆ ಮಾಡಬೇಕು ಅನ್ನೋದೇ ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಅಲ್ಲದೇ ಕೊಂಡ ಪುಸ್ತಕವನ್ನ ನಿಗದಿತ ಸಮಯಕ್ಕೆ ಹಿಂದಿರುಗಿಸೋದು ಕೂಡ ಎಲ್ಲರ ಕೈಯಿಂದ ಆಗುವ ಕೆಲಸವಲ್ಲ. ಕೆಲವೊಬ್ಬರು ಈ ವಿಚಾರದಲ್ಲಿ ತುಂಬಾನೇ ಕಟ್ಟುನಿಟ್ಟಾಗಿ ಇರುತ್ತಾರೆ. ಸರಿಯಾದ ಸಮಯಕ್ಕೆ ಪುಸ್ತಕಗಳನ್ನ ಹಿಂದಿರುಗಿಸುತ್ತಾರೆ. ಆದರೆ ಇನ್ನೂ ಕೆಲ ಜನರು ವರ್ಷ ಕಳೆದರೂ ಪುಸ್ತಕಗಳನ್ನ ವಾಪಾಸ್ ಮಾಡುವ ಗೋಜಿಗೇ ಹೋಗೋದಿಲ್ಲ. ಇಂತಹದ್ದೇ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆನಡಾದ ಲೈಬ್ರರಿಯೊಂದರಲ್ಲಿ ಬರೋಬ್ಬರಿ 82 ವರ್ಷಗಳ ಬಳಿಕ ಪುಸ್ತಕವನ್ನ ವಾಪಸ್ ಮಾಡಲಾಗಿದೆ..! ಟಿಯಾಗೋದ ಸೀಮಿತ ಎಡಿಷನ್ ನ ಹೊಸ ಕಾರು ಲಾಂಚ್ ಜಾರ್ಡನ್ ಮುಸೈಸೈನ್ ಎಂಬವರು ತಮ್ಮ ಮನೆಯಲ್ಲಿ ಹಳೆಯ ಪುಸ್ತಕವೊಂದನ್ನ ಕಂಡಿದ್ದರು. ಅಲ್ಲದೇ ಇದನ್ನ ಲೈಬ್ರರಿಯೊಂದ ತಂಡ ಪುಸ್ತಕ ಅನ್ನೋದು ತಿಳಿದು ಬಂದಿದೆ. ಆದರೆ ಈ ಪುಸ್ತಕವನ್ನ ಬರೋಬ್ಬರಿ 82 ವರ್ಷಗಳ ಹಿಂದೆ ಈ ಲೈಬ್ರರಿಯಿಂದ ಎರವಲು ಪಡೆಯಲಾಗಿತ್ತು. ಇನ್ನು ಈ ವಿಚಾರವಾಗಿ ಮಾತನಾಡಿದ ಮುಸೈಸೈನ್, ನಾವು ಸ್ನಾನಗೃಹದಲ್ಲಿ ಫ್ಯಾನ್ವೊಂದನ್ನ ಫಿಕ್ಸ್ ಮಾಡುತ್ತಿದ್ದೆವು. ಹೀಗಾಗಿ ನಮಗೆ ಮೇಲ್ಛಾವಣಿಯಲ್ಲಿ ರಂಧ್ರ ಮಾಡಬೇಕಾಗಿ ಬಂತು. ಈ ವೇಳೆ ನಮಗೆ ಹಳೆಯ ಪುಸ್ತಕಗಳು ಸಿಕ್ಕವು ಎಂದು ಹೇಳಿದ್ದಾರೆ. ಈ ಪುಸ್ತಕವನ್ನ ಲೈಬ್ರರಿಯಿಂದ 1929ರಲ್ಲಿ ಪುಟ್ಟ ಹುಡುಗಿಯೊಬ್ಬಳು ಎರವಲು ಪಡೆದಿದ್ದರು. ಮಾರ್ಚ್ ಹಾಗೂ ಮೇನಲ್ಲಿ ಈ ಪುಸ್ತಕದ ಹಿಂತಿರುಗುವ ಅವಧಿಯನ್ನ ನವೀಕರಿಸಲಾಗಿದೆ.