alex Certify ಮಾನವೀಯತೆ ಇನ್ನೂ ಇದೆ ಎಂಬ ಸಂದೇಶ ಸಾರುತ್ತೆ ಈ ಹೃದಯಸ್ಪರ್ಶಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆ ಇನ್ನೂ ಇದೆ ಎಂಬ ಸಂದೇಶ ಸಾರುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಮಾನವೀಯ ಮೌಲ್ಯಗಳುಳ್ಳ ವಿಡಿಯೋಗಳು ಬೆಳಕಿಗೆ ಬರ್ತಾನೇ ಇರುತ್ತೆ. ಈ ವಿಡಿಯೋಗಳನ್ನ ನೋಡ್ತಿದ್ರೆ ಸಮಾಜದಲ್ಲಿ ಇನ್ನೂ ಮಾನವೀಯತೆ ಅನ್ನೋದು ನೆಲೆಸಿದೆ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತೆ.

ಇದೀಗ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆಲ್ಲುತ್ತಿದೆ. ಟಿಕ್​ಟಾಕ್​ನಲ್ಲಿ ಮೊದಲು ಶೇರ್​ ಮಾಡಲಾದ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಳೆಯ ನಡುವೆಯೇ ರಸ್ತೆಯಲ್ಲಿ ನಿಂತು ವಾಹನಕ್ಕಾಗಿ ಕಾಯುತ್ತಿದ್ದರು.

ದುರದೃಷ್ಟವಶಾತ್​ ಆಕೆಯ ಬಳಿ ಛತ್ರಿಯೂ ಇಲ್ಲದ ಕಾರಣ ಆಕೆ ಮಳೆಯಲ್ಲೇ ನೆನೆಯುವಂತಾಯ್ತು.

ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಕೂಡ ಆಗಿದ್ದರಿಂದ ವಾಹನಗಳು ನಿಂತಲ್ಲೇ ನಿಂತಿದ್ದವು. ಮಹಿಳೆಯ ಈ ಅವಸ್ಥೆಯನ್ನ ಕಂಡ ವ್ಯಕ್ತಿಯೋರ್ವ ಟ್ರಕ್​ನಿಂದ ಇಳಿದು ಆಕೆಗೆ ಛತ್ರಿಯನ್ನ ನೀಡಿದ್ದಾನೆ.

ಇನ್​​ಸ್ಟಾಗ್ರಾಂ​ನಲ್ಲಿ ಈ ವಿಡಿಯೋಗೆ ಆಕೆ ಈ ಕ್ಷಣವನ್ನ ಎಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ ಎಂದು ಶೀರ್ಷಿಕೆ ನೀಡಲಾಗಿದೆ. ಬಳಿಕ ಈ ವಿಡಿಯೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​​ ಮಾಡಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಟ್ರಕ್​ ಚಾಲಕನ ಮಾನವೀಯತೆಗೆ ಸಲಾಂ ಎಂದಿದ್ದಾರೆ.

View this post on Instagram

A post shared by Nextdoor (@nextdoor)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...