alex Certify ತನ್ನ ಪ್ರಾಣ ಒತ್ತೆಯಿಟ್ಟು ಮಗುವನ್ನು ಕಾಪಾಡಿದ ಮನೆಗೆಲಸದಾಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಪ್ರಾಣ ಒತ್ತೆಯಿಟ್ಟು ಮಗುವನ್ನು ಕಾಪಾಡಿದ ಮನೆಗೆಲಸದಾಕೆ

ಲೆಬನಾನ್‌ ರಾಜಧಾನಿ ಬೈರೂತ್‌ನಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ನಗರದ ಪ್ರಮುಖ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಜೀವ ಹಾಗೂ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಘಟನೆಯಲ್ಲಿ 100+ ಜನರ ಮೃತಪಟ್ಟು, 4000+ ಜನರು ಗಾಯಗೊಂಡಿದ್ದಾರೆ.

ಈ ಹೃದಯವಿದ್ರಾವಕ ಘಟನಾವಳಿಯ ನಡುವೆ, ಪುಟ್ಟ ಮಗುವೊಂದನ್ನು ಮನೆಕೆಲಸದಾಕೆ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ರಕ್ಷಿಸಿದ ಸಿಸಿಟಿವಿ ವಿಡಿಯೋವೊಂದು ವೈರಲ್ ಆಗಿದೆ.

“ಪ್ರತಿಯೊಬ್ಬರೂ ಇಂದಿನ ಡೆಡ್ಲಿ #BeirutBlast ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಸ್ಫೋಟದ ಬೆನ್ನಿಗೇ ಮನೆಗೆಲಸದಾಕೆಯೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಗುವಿನ ಪ್ರಾಣ ಕಾಪಾಡಿದ ವಿಡಿಯೋ ಇಲ್ಲಿದೆ. ಹೀರೋಗಳು ಎಲ್ಲಿ ಬೇಕಾದರೂ ಇರಬಹುದು” ಎಂದು ಮೊಹಮ್ಮದ್ ಲಿಲಾ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...