alex Certify ಗ್ರಾಹಕ ನೀಡಿದ ಹಣ ಕಂಡು ಚಕಿತರಾದ ಬೇಕರಿ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕ ನೀಡಿದ ಹಣ ಕಂಡು ಚಕಿತರಾದ ಬೇಕರಿ ಸಿಬ್ಬಂದಿ

ಓಹಿಯೋ: ಅಪ್ಪರ್ ಆರ್ಲಿಂಗ್ಟನ್ ನಟ್ರೆಮೊಂಟ್ ಗೂಡಿ ಬೇಕರಿಗೆ ಬಂದ ಒಂದು ಫೋನ್ ಕಾಲ್ ಅಲ್ಲಿಯ ಸಿಬ್ಬಂದಿಗಳನ್ನು ಚಕಿತಗೊಳಿಸುತ್ತೆ.

ಕಾರಣ ಅವರ ಬಳಿ ಒಂದು ಡೋನಟ್ ಅನ್ನು ಖರೀದಿಸಿದ ವ್ಯಕ್ತಿ ನಾನು ನಿಮಗೆ 1000 ಡಾಲರ್ ಗಳನ್ನು (ರೂ.76,500 ) ಪಾವತಿಸಲು ಇಷ್ಟ ಪಡುತ್ತೇನೆ ಎಂದು ಹೇಳಿ ಅಷ್ಟನ್ನು ಪಾವತಿಸಿದ್ದಾರೆ.

ಕರೋನಾದಿಂದಾಗಿ ತಮ್ಮ ಮುಕ್ಕಾಲು ಪಾಲು ಆದಾಯವನ್ನು ಕಳೆದುಕೊಂಡಿದ್ದ ಬೇಕರಿ, ಸಂಕಷ್ಟಕ್ಕೆ ಸಿಲುಕಿತ್ತು. ಈಗ ಅವರ ಒಂದು ಸಹಾಯದಿಂದ ಮುಂದೆ ನಡೆಸಿಕೊಂಡು ಹೋಗಲು ಅನುಕೂಲವಾಗಿದೆ ಎಂದು ಬೇಕರಿಯ ಮ್ಯಾನೇಜರ್ ಎಮಿಲಿ ಸ್ಮಿತ್ ತಮ್ಮ ಸಂತೋಷವನ್ನು ಬೇಕರಿಯ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ಅವರು ನಮ್ಮ ಕಾಯಂ ಗ್ರಾಹಕರಾಗಿದ್ದು, ನಾನು ನಿಮಗೆ ಸಹಾಯ ಮಾಡಲೇಬೇಕೆಂದು ಹೇಳಿದರು ಎಂದು ಸಹ ತಿಳಿಸಿದ್ದಾರೆ. ಈ ಮೊದಲು ತಾವು ತೂಕ ಕಡಿಮೆ ಮಾಡಿಕೊಳ್ಳಲು ಡಯಟ್ ನಲ್ಲಿದ್ದಾಗ ಬೇಕರಿಗೆ ಸಹಾಯ ಮಾಡಲು ತಮ್ಮ ಸಹೋದ್ಯೋಗಿಗಳಿಗೆ ಪಿಜ್ಜಾ ಪಾರ್ಟಿಯನ್ನು ನಮ್ಮ ಗ್ರಾಹಕ ನೀಡಿದ್ದರು ಎಂದು ಎಮಿಲಿ ಸ್ಮಿತ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

ಫೇಸ್ ಬುಕ್ ನಲ್ಲಿ ಸುದ್ದಿ ಹರಡುತ್ತಿದ್ದಂತೆ, ಜನರು ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಬೇಕರಿಗೆ ಮೊದಲಿನ ಹಾಗೆ ಸಾಕಷ್ಟು ಬೇಡಿಕೆಯೂ ಬಂದಿದೆ. ಆರ್ಡರ್ ನೀಡಲು ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಬೇಕರಿಯ ಸಿಬ್ಬಂದಿಗೆ 100 ಡಾಲರ್ ಟಿಪ್ಸ್ ಸಹ ನೀಡಿದ್ದಾರೆ ಎಂದು ಬೇಕರಿಯ ಸಿಬ್ಬಂದಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

We are in tears ?❤️❤️❤️ This is a custard donut for $1,000 to help keep us in business. What a blessing ❤️❤️❤️❤️

Posted by Tremont Goodie Shop on Monday, April 13, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...