ಆಸ್ಟ್ರೇಲಿಯಾದ ಕಾಡೊಂದರಲ್ಲಿ ಕಂಡ ವಯಸ್ಸಾದ ಕುರಿಯೊಂದನ್ನು ರಕ್ಷಿಸಲಾಗಿದ್ದು ಅದರ ಮೈಮೇಲೆ ಬೆಳೆದಿದ್ದ 35 ಕೆಜಿಯಷ್ಟು ಉಣ್ಣೆಯನ್ನು ತೆಗೆದು ಅದರ ದೇಹ ಭಾರವನ್ನು ಇಳಿಸಲಾಗಿದೆ.
ವಿಕ್ಟೋರಿಯಾದ ಲ್ಯಾನ್ಸ್ಫೀಲ್ಡ್ನ ಎಡ್ಗರ್ ಮಿಶನ್ ಫಾರಂ ತಾಣದ ಸಿಬ್ಬಂದಿ ಈ ಕುರಿಯನ್ನು ರಕ್ಷಿಸಿದ್ದಾರೆ. ಅಲ್ಲಿರುವ ಇತರ ಕುರಿಗಳೊಂದಿಗೆ ಬರಾಕ್ ನಿವೃತ್ತ ಜೀವನ ನಡೆಸುತ್ತಿದೆ.
ಕರುವಿಗಿರುವ ಕಾಲಿನ ಸಂಖ್ಯೆ ನೋಡಿ ನೆಟ್ಟಿಗರು ಶಾಕ್…!
ಬರಾಕ್ ಹೆಸರಿನ ಈ ಕುರಿಯನ್ನು ಹಿಂದೆ ಯಾರೋ ಸಾಕುತ್ತಿದ್ದು, ಅದರ ಕಿವಿಯ ಮೇಲೆ ಟ್ಯಾಗ್ ಇದೆ. ಕಾಡಿನಲ್ಲಿ ಬಂಡೆಗಳ ಮೇಲೆ ಓಡಾಡುತ್ತಾ ಕಾಲ ಕಳೆದ ಕುರಿಯ ಕಾಲುಗಳು ಬಲಿಷ್ಠವಾಗಿವೆ. ಕಣ್ಣಿನ ಸುತ್ತ ಉಣ್ಣೆ ಬೆಳದ ಕಾರಣ ಕುರಿಗೆ ಸರಿಯಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ.