alex Certify ಆಕಸ್ಮಿಕವಾಗಿ ಸಂಧಿಸಿ ಮುದ್ದಾಡಿದ ಶ್ವಾನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಸ್ಮಿಕವಾಗಿ ಸಂಧಿಸಿ ಮುದ್ದಾಡಿದ ಶ್ವಾನಗಳು

ಇದೊಂದು ಆಶ್ಚರ್ಯಕರ ಸುದ್ದಿ. ಡೇವ್ ಎಂಬ ನಾಯಿ ಮರಿ ತನ್ನ ಮಾಲೀಕನೊಂದಿಗೆ ವಾಕ್ ಮಾಡುವ ಸಂದರ್ಭದಲ್ಲಿ ಎದುರಾದ ತನ್ನ ಸಹೋದರಿಯನ್ನು ಗುರುತಿಸಿ ಮನುಷ್ಯರ ರೀತಿ ತಬ್ಬಿಕೊಂಡ ಪ್ರಸಂಗ ನಡೆದಿದೆ.

ಮನುಷ್ಯ ಕುಟುಂಬ ಪುನರ್ಮಿಲನಗಳು ಯಾವಾಗಲೂ ನಡೆಯುತ್ತಿರುತ್ತವೆ. ಇಂತ ಪುನರ್‌ಮಿಲನಗಳು ವ್ಯಕ್ತಿಗಳನ್ನು ಭಾವುಕರನ್ನಾಗಿಸುತ್ತದೆ. ಆದರೆ, ಈ ಸುದ್ದಿ ನಾಯಿ ಮರಿಗಳಿಗೆ ಸಂಬಂಧಿಸಿದ ಪುನರ್ಮಿಲನ.

ಲಿಬ್ಬಿ ಎಂಬುವರು ತಮ್ಮ ತಂದೆ ಕಳಿಸಿದ ಎರಡು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ನಾಯಿ ಮರಿಗಳು ಒಟ್ಟಿಗೆ ಹುಟ್ಟಿದ್ದು, ಆಕಸ್ಮಿಕವಾಗಿ ಎದುರುಬದುರಾದಾಗ ಒಂದನ್ನೊಂದು ಗುರುತಿಸಿಕೊಂಡು ಅಪ್ಪಿಕೊಂಡಿದೆ. ಆದರೆ ಈ ಘಟನೆ ಎಲ್ಲಿ ನಡೆದಿದ್ದು, ನಾಯಿಮರಿಗಳು ಯಾವಾಗ ಬೇರೆಯಾದವು ಎಂಬುದರ ಮಾಹಿತಿ ದೊರಕಿಲ್ಲ. ನೆಟ್ಟಿಗರು ಮಾತ್ರ ಈ ಫೋಟೋವನ್ನು ನೋಡಿ ಭಾವುಕರಾಗಿ ತಮ್ಮ ಭಾವನೆಯನ್ನು ಕಣ್ಣೀರು ಹಾಕುವ ಎಮೋಜಿಗಳ ಮೂಲಕ ಹಂಚಿಕೊಂಡಿದ್ದಾರೆ.

ಆದರೆ ಕೆಲವರು ಈ ಶ್ವಾನಗಳು ಗೊಂಬೆಗಳು ಎಂದು ಅನುಮಾನ ವ್ಯಕ್ತಪಡಿಸಿದ್ದು, ಪ್ರಚಾರಕ್ಕಾಗಿ ಈ ರೀತಿ ಹಾಕಲಾಗಿದೆ ಎಂದಿದ್ದಾರೆ. ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅನುಮಾನ ಹೌದು ಎನ್ನುವಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...