alex Certify ಆಗಸದಲ್ಲೇ ಕಾಂಗರೂ ಚಿತ್ರ ಬಿಡಿಸಿದ ವಿಮಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸದಲ್ಲೇ ಕಾಂಗರೂ ಚಿತ್ರ ಬಿಡಿಸಿದ ವಿಮಾನ…!

Australia's Qantas Airlines Bids Goodbye with Kangaroo in Sky as ...

ಮೆಲ್ಬೋರ್ನ್‌: ಆಸ್ಟ್ರೇಲಿಯಾದ ಕ್ವಾಂಟಾಸ್ ಏರ್‌ವೇಸ್ ನ ಬೋಯಿಂಗ್ 747 ಮಾದರಿಯ ಕೊನೆಯ ವಿಮಾನ ಬುಧವಾರ ನಿವೃತ್ತಿ ಹೊಂದಿದ್ದು, ವಿಶಿಷ್ಟ ರೀತಿಯಲ್ಲಿ ವಿದಾಯ ಹೇಳಲಾಯಿತು.

ಮೊಂಜೊವ್ ಮರುಭೂಮಿ ಹಾಗೂ ಸಮುದ್ರ ಪ್ರದೇಶದಲ್ಲಿ ಒವೆನ್ ಜುಪ್ ಹಾಗೂ 6 ಪೈಲೆಟ್ ಗಳನ್ನು ಹೊತ್ತು ಕಾಂಗರು ಶೈಲಿಯಲ್ಲಿ ವಿಮಾನ ಹಾರಾಟ ನಡೆಸಿತು.

“ಬೋಯಿಂಗ್ 747 ಎಂಬುದು ಕ್ವಾಂಟಾಸ್ ಇತಿಹಾಸದಲ್ಲಿ ಮಾತ್ರವಲ್ಲ ವಿಮಾನಯಾನ ಇತಿಹಾಸದಲ್ಲೇ ಗಮನಾರ್ಹವಾದದ್ದು. ಇದರ ಹಿನ್ನೆಲೆಯನ್ನು ತಿರುಗಿ ನೋಡಿದರೆ ಹೆಮ್ಮೆಯೆನಿಸುತ್ತದೆ” ಎಂದು ಝುಪ್ ಹೇಳಿದ್ದಾರೆ.‌

ವಿಮಾನಕ್ಕೆ ವಿದಾಯ ಹೇಳುವ ಈ ಸನ್ನಿವೇಶವನ್ನು ಹಲವರು ಶೇರ್ ಮಾಡಿದ್ದಾರೆ.‌ ಹಲವು ಪ್ರಯಾಣಿಕರು ನಿಲ್ದಾಣದತ್ತ ಸೇರಿದ್ದರು. ಕ್ವಾಂಟಾಸ್ ಬೋಯಿಂಗ್ 747 ವಿಮಾನಗಳು ಸುಮಾರು 50 ವರ್ಷದ ಇತಿಹಾಸದಲ್ಲಿ 250 ಲಕ್ಷ ಪ್ರಯಾಣಿಕರನ್ನು ಸಾಗಿಸಿವೆ. ರಾಣಿ ಎಲೆಜೆಬೆತ್- 2 ಹಾಗೂ 1989 ನಿಂದ ಎಲ್ಲ ಒಲಿಂಪಿಕ್ ತಂಡಗಳ ಸದಸ್ಯರು ಇದೇ ವಿಮಾನಗಳಲ್ಲಿ ಪ್ರಯಾಣ ಮಾಡಿದ್ದರು. ಒಂದುಕಾಲದಲ್ಲಿ ಸಂಪೂರ್ಣ ಬೋಯಿಂಗ್ 747 ವಿಮಾನ ಹೊಂದಿದ ರಾಷ್ಟ್ರ ಆಸ್ಟ್ರೇಲಿಯವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...