alex Certify ಮೋದಿ ಮೆಚ್ಚಿಸಲು ಸಮೋಸಾ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಮೆಚ್ಚಿಸಲು ಸಮೋಸಾ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರ್ರಿಸನ್ ಹಾಗೂ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಲಿಂಕ್ ಸಭೆ ಈ ವಾರ ನಡೆಯಲಿದೆ.

ಅದಕ್ಕಾಗಿ ಸ್ಕಾಟ್ ಅವರು ಮೋದಿ ಅವರನ್ನು ಮೆಚ್ಚಿಸಲು ಭಾರತದ ತಿಂಡಿ ಸಮೋಸಾದ ಫೋಟೋವನ್ನು ಟ್ವಿಟರ್ ನಲ್ಲಿ ಹಾಕಿದ್ದಾರೆ. ಅದಕ್ಕೆ “ಸ್ಕೊಮೊಸಾ” ಎಂದು ಕ್ಯಾಪ್ಶನ್ ನೀಡಿದ್ದಾರೆ.

“ನಾನೇ ಸಮೋಸಾ ಹಾಗೂ ಅದಕ್ಕೆ ಹಚ್ಚಿಕೊಳ್ಳಲು ಮಾವಿನಕಾಯಿ ಚಟ್ನಿ ಮಾಡಿದ್ದೇನೆ. ಮೋದಿ ಅವರೊಟ್ಟಿಗೆ ಅದನ್ನು ಹಂಚಿಕೊಳ್ಳಲು ಬಯಸುತ್ತೇನೆ” ಎಂದು ಮಾರ್ರಿಸನ್ ಬರೆದಿದ್ದಾರೆ.

ಫೋಟೋ 6,500 ರೀಟ್ವೀಟ್ ಆಗಿದ್ದು, 30,500 ಲೈಕ್ ಗಳನ್ನು ಪಡೆದಿದೆ. ಅಲ್ಲದೆ, ಫೇಸ್ ಬುಕ್ ಇನ್ಸ್ಟಾಗ್ರಾಂ‌ ಗಳಲ್ಲೂ ಶೇರ್ ಆಗಿದೆ. “ಸ್ಕೊಮೊಸಾ” ಶಬ್ದ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಅವರ ಸೂಚ್ಯ ಮಾತಿನ‌ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...