alex Certify ಮಗುವಿನ ಹೆಸರಿನ ಕಾರಣಕ್ಕೆ 60 ವರ್ಷಗಳ ಕಾಲ ಉಚಿತ ಪಿಜ್ಜಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ಹೆಸರಿನ ಕಾರಣಕ್ಕೆ 60 ವರ್ಷಗಳ ಕಾಲ ಉಚಿತ ಪಿಜ್ಜಾ…!

ಕೆಲ ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದ ಸಿಡ್ನಿ ಮೂಲದ ದಂಪತಿ ಗಂಡು ಮಗುವೊಂದರ ಪೋಷಕರಾದರು. ಆ ಮಗುವಿಗೆ ಮುದ್ದಾದ ಹೆಸರನ್ನೂ ಇಟ್ಟಿದ್ದಾರೆ. ಆದರೆ ಈ ಮಗುವಿನ ಹೆಸರಿನ ಮೂಲಕವೇ ಇದೀಗ ಈ ದಂಪತಿ ಟಾಕ್​ ಆಫ್​ ದ ಟೌನ್​ ಆಗಿದ್ದಾರೆ.

ಕ್ಲೆಮೆಂಟೈನ್​ ಓಲ್ಡ್​ಫೀಲ್ಡ್ ಹಾಗೂ ಆಂಥೋನಿ ಲಾಟ್​ ತಮ್ಮ ಮಗುವಿಗೆ ಡೊಮಿನಿಕ್​ ಜೂಲಿಯನ್​ ಲಾಟ್​​ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರಿನಿಂದಾಗಿ ಡೋಮಿನಾಸ್​ ಫಿಜ್ಜಾ ಸಂಸ್ಥೆ ಇವರಿಗೆ ಬರೋಬ್ಬರಿ 60 ವರ್ಷಗಳ ಉಚಿತವಾಗಿ ಪಿಜ್ಜಾ ನೀಡಲಿದೆ.

ಆಸ್ಟ್ರೇಲಿಯಾದಲ್ಲಿ ಡೊಮಿನೋಸ್​ ಸಂಸ್ಥೆ ಇದೇ ತಿಂಗಳ 9ನೇ ತಾರೀಖಿನಂದು 60 ವರ್ಷಗಳನ್ನ ಪೂರೈಸಿದೆ. ಇದೇ ಸಂಭ್ರಮಕ್ಕೆ ಯಾವ ಪೋಷಕರು ತಮ್ಮ ಮಗುವಿಗೆ ಡೊಮಿನಿಕ್​ ಎಂದು ನಾಮಕರಣ ಮಾಡುತ್ತಾರೋ ಅವರಿಗೆ 60 ವರ್ಷಗಳ ಕಾಲ ಪಿಜ್ಜಾ ಉಚಿತವಾಗಿ ನೀಡೋದಾಗಿ ಸಂಸ್ಥೆ ಘೋಷಣೆ ಮಾಡಿತ್ತು.

ಕ್ಲೆಮೆಂಟನ್​ ದಂಪತಿ ಕೂಡ 9ನೇ ತಾರೀಖಿನಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಡಾಮಿನಿಕ್​ ಎಂದು ಹೆಸರಿಡುವ ಮೂಲಕ ಜೀವಮಾನವಿಡೀ ಪಿಜ್ಜಾ ಉಚಿತವಾಗಿ ಪಡೆಯಲಿದ್ದಾರೆ.

https://www.instagram.com/p/CIeVYvxCjGO/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...